ಮೂಡಿಗೆರೆ: ತಾಲ್ಲೂಕಿನ ಬೈದುವಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ತ್ರಿಪುರಾಂತಕೇಶ್ವರ ಕ್ರಿಕೆಟರ್ಸ್ ವತಿಯಿಂದ ಹಮ್ಮಿಕೊಂಡಿದ್ದ ಬೈದುವಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಳೀಯ ಬೈದುವಳ್ಳಿ ಮಿಟ್ಟಿ ಬ್ರದರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮೇ 15ರಿಂದ ಮೂರು ದಿನಗಳ ಕಾಲ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ತಂಡಗಳು ಭಾಗವಹಿಸಿದ್ದವು. ಕ್ರೀಡಾಕೂಟಕ್ಕೆ ಊರುಬಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಂ.ರವೀಂದ್ರ ಬಾಳೆಗದ್ದೆ ಚಾಲನೆ ನೀಡಿದರು.

ಸೆಮಿ ಫೈನಲ್ಗೆ ನಾಲ್ಕು ತಂಡಗಳು ಆಯ್ಕೆಯಾಗಿದ್ದವು. ಫೈನಲ್ ಪಂದ್ಯದಲ್ಲಿ ಮಿಟ್ಟಿ ಬ್ರದರ್ಸ್ ಬೈದುವಳ್ಳಿ ಹಾಗೂ ಗೋಲ್ಡನ್ ವಾರಿಯರ್ಸ್ ಚನ್ನಡ್ಲು ಬಾಳೂರು ತಂಡಗಳು ಮುಖಾಮುಖಿಯಾಗಿದ್ದವು. ಗೋಲ್ಡನ್ ವಾರಿಯರ್ಸ್ ಚೆನ್ನಡ್ಲು ತಂಡ ಎರಡನೇ ಸ್ಥಾನ ಪಡೆಯಿತು. ಗೋಲ್ದನ್ ವಾರಿಯರ್ಸ್ ಗೋಣಿಬೀಡು ತಂಡ ಮೂರನೇ ಸ್ಥಾನ ಮತ್ತು ಬೈರವ ವಾರಿಯರ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಆಲ್ರೌಂಡರ್ ಪುನೀತ್ ಗೌಡ ಬೈದುವಳ್ಳಿ ಸರಣಿ ಪುರಷೋತ್ತಮ ಪ್ರಶಸ್ತಿ ಪಡೆದರು. ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಕೆರೆಹಿತ್ಲು ಎಸ್ಟೇಟ್ ಮಾಲೀಕ ಬ್ಲಾನಿ ರೋಡ್ರಿಗೆಸ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪುಷ್ಪರಾಜು, ಗ್ರಾಮಸ್ಥರು, ದಾನಿಗಳು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು. ವಿಜೇತ್ ಬಾಳೂರು ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-126-436390447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.