ಮೈಸೂರು: ಇಲ್ಲಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ತಂಡದವರು ‘ಅಂಬೇಡ್ಕರ್ ಕಪ್’ ತಮ್ಮದಾಗಿಸಿಕೊಂಡು ಸಂಭ್ರಮಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಮಾನಸಗಂಗೋತ್ರಿಯ ಗೌತಮ್ ಹಾಸ್ಟೆಲ್ ಮೈದಾನ ಹಾಗೂ ಕಾಫಿ ಬೋರ್ಡ್ ಮೈದಾನದಲ್ಲಿ ಎರಡು ದಿನಗಳವರೆಗೆ ಟೂರ್ನಿ ನಡೆಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಂಡ ರನ್ನರ್ ಅಪ್ ಎನಿಸಿದರೆ, ಅಗ್ನಿಶಾಮಕ ದಳದ ತಂಡದವರು 3ನೇ ಸ್ಥಾನ ಪಡೆದರು. ಸಮಾಜ ಕಲ್ಯಾಣ ಇಲಾಖೆಯಿಂದ ಇದೇ ಮೊದಲ ಬಾರಿಗೆ ವಿವಿಧ ಇಲಾಖೆಗಳ ಜಿಲ್ಲೆಯ ಅಧಿಕಾರಿಗಳು–ನೌಕರರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ನಡೆಸಲಾಯಿತು. ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ನೇತೃತ್ವದಲ್ಲಿ ಪಂದ್ಯಗಳು ನಡೆದವು.

ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಎಸ್ಡಬ್ಲ್ಯುಡಿ ವಾರಿಯರ್ಸ್ ಹಾಗೂ ಸೆಸ್ಕ್ (ಇಂಧನ ಇಲಾಖೆ) ತಂಡಗಳು ಸೆಮಿಫೈನಲ್ ತಲುಪಿದ್ದವು. ಸೆಸ್ಕ್ ತಂಡ ಮೊದಲನೇ ಸೆಮಿಫೈನಲ್ನಲ್ಲಿ ಜಯಿಸಿ ಫೈನಲ್ ಪ್ರವೇಶಿಸಿತ್ತು. ಆರೋಗ್ಯ ಇಲಾಖೆ ತಂಡ 2ನೇ ಸೆಮಿಫೈನನ್ಲ್ಲಿ ಗೆದ್ದು ಅಂತಿಮ ಘಟ್ಟ ತಲುಪಿತ್ತು.

ಫೈನಲ್ ಪಂದ್ಯದಲ್ಲಿ ಸೆಸ್ಕ್ ತಂಡದವರು ಆರೋಗ್ಯ ಇಲಾಖೆ ತಂಡದ ಎದುರು ಮಿಂಚಿದರು. 56 ರನ್ಗಳಿಂದ ಗೆದ್ದು‘ಅಂಬೇಡ್ಕರ್ ಕಪ್’ಗೆ ಮುತ್ತಿಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-38-1396704302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.