ಮೈಸೂರು: ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜು ತಂಡವು ಶನಿವಾರ ಇಲ್ಲಿನ ಎನ್ಐಇ (ಉತ್ತರ) ಕಾಲೇಜು ಮೈದಾನದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ವ್ಯಾಪ್ತಿಯ ಅಂತರ ಕಾಲೇಜು ಮಹಿಳೆಯರ ರಾಜ್ಯಮಟ್ಟದ ಫುಟ್ಬಾಲ್ ಚಾಂಪಿಯನ್ಷಿಪ್ ತನ್ನದಾಗಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಆರ್ವಿ ಕಾಲೇಜು ತಂಡವು 3–0 ಗೋಲುಗಳ ಅಂತರದಿಂದ ಮಂಗಳೂರಿನ ಎಸ್ಜೆಇಸಿ ತಂಡವನ್ನು ಮಣಿಸಿತು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆರ್ವಿ ಕಾಲೇಜು ವನಿತೆಯರು ಅಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸೆಮಿಫೈನಲ್ಸ್ನಲ್ಲಿ ಆರ್ವಿ ಕಾಲೇಜು ತಂಡ 2–0 ಅಂತರದಿಂದ ಬೆಂಗಳೂರಿನ ಸಿಎಂಆರ್ಐಟಿ ತಂಡವನ್ನು ಹಾಗೂ ಎಸ್ಜೆಇಸಿ ತಂಡ 3–1ರಿಂದ ಬೆಂಗಳೂರಿನ ಬಿಎಂಎಸ್ಸಿಇ ತಂಡವನ್ನು ಮಣಿಸಿದವು. ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜು ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡವು.

ಉದ್ಘಾಟನೆ: ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ತಾರಾ ಆರ್. ಅರಗಂ ಟೂರ್ನಿ ಉದ್ಘಾಟಿಸಿದರು. ಎನ್ಐಇ ವ್ಯವಸ್ಥಾಪನಾ ಸಮಿತಿಯ ಗೌರವ ಖಜಾಂಚಿ ಎನ್. ಸತ್ಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್ಐಇ ಪ್ರಾಂಶುಪಾಲ ಬಿ.ಎಸ್. ನಾಗೇಂದ್ರ ಪರಾಶರ್, ಡೀನ್ ಎಚ್.ಎಸ್. ಪ್ರಸನ್ನ, ಆರ್. ಕಾವ್ಯಾ, ಭರತ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-39-1231502202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.