ಮೈಸೂರು: ಸುತ್ತೂರಿನ ಜೆಎಸ್ಎಸ್ ವಿದ್ಯಾಪೀಠ ಸಭಾಂಗಣದಲ್ಲಿ ಜೆಎಸ್ಎಸ್ ಸಂಸ್ಥೆ ಹಾಗೂ ರಾಷ್ಟ್ರೀಯ ಸ್ಪೋರ್ಟ್ಸ್ ಏರೋಬಿಕ್ಸ್ ಸಂಸ್ಥೆಯಿಂದ ನಡೆದ ರಾಷ್ಟ್ರೀಯ ಏರೋಬಿಕ್ಸ್ ಹಾಗೂ ಹಿಪ್ ಹಾಪ್ ಚಾಂಪಿಯನ್ಶಿಪ್ನಲ್ಲಿ ತಮಿಳುನಾಡು ತಂಡವು ಸಮಗ್ರ ಪ್ರಶಸ್ತಿ ಪಡೆಯಿತು.

ಮಹಾರಾಷ್ಟ್ರ ತಂಡ ದ್ವಿತೀಯ, ಕರ್ನಾಟಕ ತೃತೀಯ ಹಾಗೂ ರಾಜಸ್ಥಾನ ತಂಡವು ನಾಲ್ಕನೇ ಸ್ಥಾನ ಪಡೆದವು. ಸ್ಪೋರ್ಟ್ ಏರೋಬಿಕ್ಸ್, ಫಿಟ್ನೆಸ್ ಏರೋಬಿಕ್ಸ್, ಸ್ಟೆಪ್ ಏರೋಬಿಕ್ಸ್ ಹಾಗೂ ಹಿಪ್ ಹಾಪ್ ವಿಭಾಗಗಳಲ್ಲಿ ವಿವಿಧ ವಯೋಮಿತಿಯ ಸ್ಪರ್ಧೆಗಳು ನಡೆದವು. ವಿವಿಧ ರಾಜ್ಯಗಳ 300ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

ಚಾಂಪಿಯನ್ಶಿಪ್ ಅನ್ನು ಉದ್ಘಾಟಿಸಿದ ಮೈಸೂರು ವಲಯ ಐಜಿಪಿ ಬೋರಲಿಂಗಯ್ಯ ಮಾತನಾಡಿ, ‘ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸಲು ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.

ಸಮಾರಂಭದಲ್ಲಿ ಜೆಎಸ್ಎಸ್ ವಿದ್ಯಾಪೀಠದ ಆಡಳಿತಾಧಿಕಾರಿ ಉದಯ ಶಂಕರ್, ಸಹಾಯಕ ಆಡಳಿತಾಧಿಕಾರಿ ತ್ರಿಪುರಾಂತಕ, ಡಾ.ಸುದರ್ಶನ್, ರಾಷ್ಟ್ರೀಯ ಏರೋಬಿಕ್ಸ್ ಸಂಸ್ಥೆ ಅಧ್ಯಕ್ಷ ಸಂತೋಷ್ ಖೈನಾರ್, ಕಾರ್ಯದರ್ಶಿ ಶುಭರಾಣಿ ಬಿ.ಪಿ., ಖಜಾಂಚಿ ಸುರಯ್ಯಾ ಖೈನಾರ್ ಹಾಗೂ ಪ್ರಧಾನ ಆಯೋಜಕ ಪ್ರಭು ಉಪಸ್ಥಿತರಿದ್ದರು.

ಪದಕ ವಿಜೇತರು ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-39-116648349

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.