ಮೈಸೂರು: ‘ಕರ್ನಾಟಕ ರಾಜ್ಯ ರೈತ ಸಂಘ ರೈತ ಪರ್ವದ ವತಿಯಿಂದ ಮೇ 24ರಂದು ಮಧ್ಯಾಹ್ನ 1ರಿಂದ ರಾತ್ರಿ 10ರವರೆಗೆ ನಗರದ ವಸ್ತು ಪ್ರದರ್ಶನ ಮೈದಾನದ ಬಳಿಯ ಡಿ. ದೇವರಾಜ್ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ’ ಎಂದು ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸುಮಾರು 35 ಜೋಡಿಗಳು ಪಾಲ್ಗೊಳ್ಳುವ ಈ ಪಂದ್ಯಾವಳಿಯು ಮಣ್ಣಿನ ಮಟ್ಟಿಯಲ್ಲಿ ನಡೆಯಲಿದೆ. ದೇಶದ ಪ್ರಮುಖ ಕುಸ್ತಿಪಟು ಮಹೇಂದ್ರ ಗಾಯಕ್ವಾಡ್, ನೇಪಾಳದ ದೇವದೂತ ಸಹಾ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಇಲ್ಲಿ ಬಹುಮಾನವಿಲ್ಲ, ಆದರೆ ಪಾಲ್ಗೊಳ್ಳುವ ಕುಸ್ತಿಪಟುಗಳಿಗೆ ನಿಗದಿತ ನಗದು, ಪ್ರಯಾಣ ವೆಚ್ಚ ನೀಡಲಾಗುತ್ತಿದೆ. ರಾಜ್ಯದ ಬೆಳಗಾವಿ, ಧಾರವಾಡ, ದಾವಣಗೆರೆ, ಬೆಂಗಳೂರು, ಮೈಸೂರಿನ ಖ್ಯಾತ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ಎರಡು ಜೊತೆ ಮಾರ್ಫಿಟ್ ಪಂದ್ಯಗಳೂ ಇರಲಿವೆ’ ಎಂದು ವಿವರಿಸಿದರು.

ಪದಾಧಿಕಾರಿಗಳಾದ ಚಾಮರಾಜು ಮಂಡಕಳ್ಳಿ, ಶ್ರೀಧರ್ ನಾಯಕ್, ಮಂಚನಾಯಕ್, ಪೈಲ್ವಾನ್ ರಾಜಣ್ಣ, ಪೈಲ್ವಾನ್ ವೆಂಕಟೇಶ್, ಪೈಲ್ವಾನ್ ಗಿರೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-36-670289091

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.