ನಾಪೋಕ್ಲು: ಸ್ಥಳೀಯ ಕೆಪಿಎಸ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೀಯಕಪೂವಂಡ ಕುಟುಂಬದವರು ಆಯೋಜಿಸಿರುವ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಟೂರ್ನಿಯ ಮೂರನೇ ದಿವಸ 24 ತಂಡಗಳು ಮುನ್ನಡೆ ಸಾಧಿಸಿ ಏ.26ರಂದು ನಡೆಯುವ ಚೀಯಕಪೂವಂಡ ಕಪ್ಗೆ ಸೆಣಸಾಡಲಿದ್ದಾರೆ.

ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಟೂರ್ನಿಯಲ್ಲಿ 295 ಕುಟುಂಬಗಳು ಪಾಲ್ಗೊಂಡಿದ್ದು, ಶುಕ್ರವಾರ 89 ಪಂದ್ಯಗಳು ನಡೆದಿದ್ದರೆ, ಶನಿವಾರ 53 ತಂಡಗಳು ಭಾಗವಹಿಸಿದ್ದವು. ಅವುಗಳನ್ನು 24 ತಂಡಗಳು ಭಾನುವಾರ ಸೆಣೆಸಾಡಲಿದ್ದು ಮಧ್ಯಾಹ್ನ ಫೈನಲ್ ಪಂದ್ಯ ನಡೆಯಲಿದೆ.

ಸ್ಪರ್ಧೆಗಳನ್ನು ಉದ್ಘಾಟಿಸಿದ ಕೊಡವ ಸಮಾಜದ ಅಧ್ಯಕ್ಷ ಮುಂಡಂಢ ಸಿ.ನಾಣಯ್ಯ ಮಾತನಾಡಿ, ‘ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಉತ್ಸವವನ್ನು ಯಶಸ್ವಿಯಾಗಿ ಸಂಘಟಿಸಲಾಗುತ್ತಿದ್ದು, ಕ್ರೀಡಾಭಿಮಾನಿಗಳ ಮನ ಸೆಳೆದಿದೆ. ಇದುವರೆಗೆ ನಾಲ್ಕು ಉತ್ಸವಗಳು ಜರುಗಿದ್ದು, ಮೂರರಲ್ಲಿ ಪಾಲ್ಗೊಳ್ಳುವ ಅವಕಾಶ ತನಗೆ ದೊರಕಿದ್ದು ಸಂತೋಷದ ವಿಷಯ. 5ನೆಯ ಉತ್ಸವಕ್ಕೆ ಚೀಯಕಪೂವಂಡ ಕುಟುಂಬಸ್ಥರು ನೇತೃತ್ವ ವಹಿಸಿದ್ದು, ದೇಶದ ಮೂಲೆ ಮೂಲೆಗಳನ್ನು ಇದು ತಲುಪಿ ಕುಟುಂಬದ ಹೆಸರು ದಾಖಲೆ ನಿರ್ಮಿಸಲಿ’ ಎಂದು ಆಶಿಸಿದರು.

ಏ.26ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಸಮಾರಂಭದ ಅಧ್ಯಕ್ಷತೆಯನ್ನು ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಸಿ.ಎಂ. ಅಪ್ಪಚ್ಚು ವಹಿಸಲಿದ್ದು, ಉತ್ಸವದ ಅಧ್ಯಕ್ಷ ಸಿ.ಕೆ. ಬೋಪಣ್ಣ, ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕರ್ನಾಟಕ ಸರ್ಕಾರದ ಮುಖ್ಯ ವಿದ್ಯುತ್ ಅಧಿಕಾರಿ ತೀತಿರ ರೋಶನ್ ಅಪ್ಪಚ್ಚು, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥ ಶರತ್ ಪರಕೋತ್ , ಕೊಡವ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ, ಮುಂಡ್ಯೋಳಂಡ ಕುಟುಂಬದ ಅಧ್ಯಕ್ಷ ಎಂ.ಟಿ.ತಿಮ್ಮಯ್ಯ, ಚೀಯಕಪೂವಂಡ ಕುಟುಂಬದ ಹಿರಿಯ ಸಿ.ಎ.ಚಿಟ್ಟಿಯಪ್ಪ, ಉಪಸ್ಥಿತರಿರುವರು.

ಶನಿವಾರ ಜರುಗಿದ ಪಂದ್ಯಗಳ ವೀಕ್ಷಕ ವಿವರಣೆಗಾರರಾಗಿ ಬಾಳೆಯಡ ದಿವ್ಯ ಮಂದಪ್ಪ, ಕೊಟ್ಟಂಗಡ ರಾಜಾ ಸುಬ್ಬಯ್ಯ, ಪೊನ್ನೊಲತಂಡ ಕಿರಣ್ ಪೊನ್ನಪ್ಪ ಕಾರ್ಯನಿರ್ವಹಿಸಿದರು.

ಪಂದ್ಯಾಟದ ನಿರ್ದೇಶಕರಾಗಿ ಚಟ್ಟಂಗಡ ರವಿ ಸುಬ್ಬಯ್ಯ, ತೀರ್ಪುಗಾರರಾಗಿ ಚಟ್ಟಂಗಡ ಕಂಬ ಕಾರ್ಯಪ್ಪ, ಜಮ್ಮಡ ಗಿಲ್, ಕೊಣಿಯಂಡ ಮಂಜು ಮಾದಯ್ಯ, ಮುಂಡಚಾಡಿರ ಭರತ್, ಪೊನ್ನೊಲತಂಡ ಹರೀಶ್ , ಪೊನ್ನೊಲತಂಡ ಯಶು, ಪೊನ್ನೊಲತಂಡ ಆರ್ಯನ್ ಸೋಮಯ್ಯ, ಪೊನ್ನೊಲತಂಡ ಆಯುಷ್ ಪೊನ್ನಣ್ಣ, ಬಾಳೆಕುಟ್ಟಿರ ಬೋಪಣ್ಣ, ಬೊಟ್ಟೋಳಂಡ ಪವಿನ್, ಕೊಣಿಯಂಡ ದೀಕ್ಷಿತ್ ಕಾರ್ಯನಿರ್ವಹಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-51-868637687

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.