ನಾಪೋಕ್ಲು: ಇಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿಯ ಮಹಿಳೆಯರ 5ಎ ಹಾಕಿಯಲ್ಲಿ ಕಂಬಿರಂಡ ಮತ್ತು ಅದೇಂಗಡ ನಡುವೆ ಹಾಗೂ ಶಿವಚಾಳಿಯಂಡ ಮತ್ತು ಕೇಚೆಟ್ಟಿರ ತಂಡಗಳ ನಡುವೆ ಏಪ್ರಿಲ್ 29 (ಬುಧವಾರ) ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

ಮಂಗಳವಾರ ನಡೆದ ಪಂದ್ಯಗಳಲ್ಲಿ ಮೈದಾನದಲ್ಲಿ ಗೋಲುಗಳು ಸುರಿಮಳೆಗರೆದವು.

ತೇಜಸ್ವಿನಿ ದೇವಯ್ಯ, ಪಾರ್ವತಿ ಹಾಗೂ ಸಂಸ್ಕೃತಿ ಪೊನ್ನಮ್ಮ ಅವರು ಗಳಿಸಿದ ತಲಾ 2 ಗೋಲುಗಳು ಹಾಗೂ ಲಕ್ಷ್ಯ ಪೊನ್ನಕ್ಕ ಅವರು ಗಳಿಸಿದ 1 ಗೋಲಿನ ನೆರವಿನಿಂದ ಕೇಚೆಟ್ಟಿರ ತಂಡವು 7-0 ಯಿಂದ ತಾತಂಡ ವಿರುದ್ಧ ಜಯ ಗಳಿಸಿತು.ಮಿಲನ ಪ್ರಕಾಶ್ ಅವರು ಗಳಿಸಿದ 5 ಗೋಲುಗಳು ಹಾಗೂ ಹನ ಅಪ್ಪಯ್ಯ ಅವರು ಗಳಿಸಿದ 2 ಗೋಲುಗಳ ನೆರವಿನಿಂದ ಕಂಬಿರಂಡ ತಂಡವೂ ಸಹ 7-1 ಅಂತರದಿಂದ ಚೇಯಂಡ ವಿರುದ್ಧ ಗೆಲುವು ಸಾಧಿಸಿತು.

ಉಳಿದಂತೆ, ಶಿವಚಾಳಿಯಂಡ 2-0ಯಿಂದ ತೆಕ್ಕಡ ವಿರುದ್ಧ; ನಾಪಂಡ 3-1 ರಿಂದ ಮುಕ್ಕಾಟಿರ (ಹರಿಹರ) ವಿರುದ್ಧ; ಕೇಚೆಟ್ಟಿರ 5-0ಯಿಂದ ಪಾಂಡಿರ ವಿರುದ್ಧ; ಚೆಪ್ಪುಡಿರ 3-1ರಿಂದ ಪಾಡೆಯಂಡ ವಿರುದ್ಧ; ಪೊನ್ನಚೆಟ್ಟಿರ 2-1ರಿಂದ ಕಲಿಯಂಡ ವಿರುದ್ಧ; ಕಂಬೀರಂಡ 5-0 ಯಿಂದ ಚೆಪ್ಪುಡಿರ ವಿರುದ್ಧ ಗೆಲುವು ಸಾಧಿಸಿದವು.

ಅದೇಂಗಡ ಮತ್ತು ಪೊನ್ನಚೆಟ್ಟಿರ ತಂಡಗಳು 1-1 ಸಮಬಲ ಸಾಧಿಸಿದವು. ನಂತರ, ಟೈ ಬ್ರೇಕರ್ನಲ್ಲಿ ಅದೇಂಗಡ 3- 1 ರಿಂದ ಪೊನ್ನಚೆಟ್ಟೀರ ವಿರುದ್ಧ ಗೆಲುವು ಸಾಧಿಸಿತು.

ತಾತಂಡ ಮತ್ತು ಕಾಯಪಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಬಳಿಕ ಟೈ ಬ್ರೇಕರ್ನಲ್ಲಿ ತಾತಂಡ 1-0 ಯಿಂದ ಕಾಯಪಂಡ ವಿರುದ್ಧ ಗೆಲುವು ಸಾಧಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-51-1346154641

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.