ನಂಜನಗೂಡು: ಬೇಸಿಗೆ ರಜೆ ಅಂತ್ಯವಾದ ಹಿನ್ನೆಲೆಯಲ್ಲಿ ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಭಾನುವಾರ ಆಯೋಜಿಸಿದ್ದ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಈ ಟೂರ್ನಿಯ ಬಾಲಕರ ವಿಭಾಗದಲ್ಲಿ ವಿಜೇತರಾದ ಸಮೃದ್ಧ್ ಮತ್ತು ತನ್ವಿಕ್ ಪ್ರಥಮ, ಜಾನಿ ಮತ್ತು ಪ್ರಜ್ವಲ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರೇವತಿ ಮತ್ತು ರಶ್ಮಿ, ಪುರುಷರ ವಿಭಾಗದಲ್ಲಿ ಕಾಶಿರಾವ್ ಮತ್ತು ಸತೀಶ್ ಅವರಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ವಿನುತಾ ಬಸವರಾಜ್ ಅವರು ಬಡಾವಣೆಯಲ್ಲಿ ನಿರ್ಮಿಸಿರುವ ವೇದಿಕೆಯ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಸಂಘದ ಅಭಿವೃದ್ಧಿಗೆ ದಿ. ಬಸವರಾಜ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು.

ಟೂರ್ನಿಗೆ ಕಾರಣರಾದ ದೀಕ್ಷಿತ್ ಅವರನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಮಹೇಶ್, ಗೌರವಾಧ್ಯಕ್ಷ ಮಲೆಯೂರು ನಾಗೇಂದ್ರ, ಕಾರ್ಯದರ್ಶಿ ಕೆ.ಎನ್. ಕಾಶಿರಾವ್, ಸದಸ್ಯರಾದ ಟಾಟಾರಾವ್, ವರದರಾಜು, ದೇವರಾಜ್, ಶಿವಕುಮಾರ್, ಕೃಷ್ಣಮೂರ್ತಿ, ಭೂಷಣ್, ಮಹೇಂದ್ರ, ಸತೀಶ್, ವೆಂಕಟೇಶ್, ರವಿಚಂದ್ರ, ಶ್ರೀನಿವಾಸ್, ಶಿವಶಂಕರ್, ಯುವ ಬಳಗದ ರಾಕೇಶ್, ನವೀನ್, ಸಂದೇಶ್, ಮಹಿಳಾ ಸಂಘದ ರಚಿತಾ, ಕಲಾವತಿ, ರೇವತಿ, ದೇವಿಕಾ, ಆಶಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-38-797872465

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.