ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಿದ್ದ ನಾಲ್ನಾಡ್ ಕಪ್ ಅಂತರ ಗ್ರಾಮ ಹಾಕಿ ಟೂರ್ನಿಯ ಅಂಗವಾಗಿ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ, ನಾಪೋಕ್ಲು ಎ ಮತ್ತು ಬಲ್ಲಮಾವಟಿ ಯೆಲ್ಲೋ ತಂಡಗಳು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದವು.

ಮಂಗಳವಾರ ನಾಪೋಕ್ಲು ಎ ಮತ್ತು ಯವಕಪಾಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಎ ತಂಡ 4 -1 ಅಂತರದಿಂದ ಜಯ ಸಾಧಿಸಿತು. ನಾಪೋಕ್ಲು ಎ ತಂಡದ ಪರವಾಗಿ ಆಟಗಾರರಾದ ನಾಚಪ್ಪ ಮತ್ತು ಪುನೀತ್ ತಲಾ ಎರಡು ಗೋಲು ಗಳಿಸಿದರು. ಯವಕಪಾಡಿ ತಂಡದ ಆಟಗಾರಜೋಯಪ್ಪ ಒಂದು ಗೋಲು ಗಳಿಸಿದರು.

ಎರಡನೇ ಸೆಮಿಫೈನಲ್ ಪಂದ್ಯ ನಾಪೋಕ್ಲು ಬಿ ಮತ್ತು ಬಲಮಾವಟಿ ಯೆಲ್ಲೋ ತಂಡಗಳ ನಡುವೆ ನಡೆಯಿತು ಬಲ್ಲಮಾವಟಿ ಯೆಲ್ಲೋ ತಂಡ 6- 0 ಅಂತರದಿಂದ ಜಯ ಸಾಧಿಸಿತು. ಬಲ್ಲಮಾವಟಿ ತಂಡದ ಪರವಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ಮೂರು,ಬೊಟ್ಟೋಳಂಡ ಅಯ್ಯಪ್ಪೆರಡು ಹಾಗೂ ದರ್ಶನ್ ಒಂದು ಗೋಲು ಗಳಿಸಿದರು. ನಾಪೋಕ್ಲು ಬಿ ತಂಡ ಯಾವುದೇ ಗೋಲು ಗಳಿಸಲು ಶಕ್ತವಾಗಲಿಲ್ಲ.

ಏಪ್ರಿಲ್ 2 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ನಾಪೋಕ್ಲು ಎ ಮತ್ತು ಬಲ್ಲಮಾವಟಿ ಯೆಲ್ಲೋ ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಮಹಿಳೆಯರಿಗಾಗಿ ಆಯೋಜಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲ್ಲಮಾವಟಿ ಮತ್ತು ನಾಪೋಕ್ಲು ತಂಡಗಳು ಗೆಲುವು ಸಾಧಿಸಿದವು. ಗುರುವಾರ ಬೆಳಿಗ್ಗೆ 10 ಗಂಟೆಗೆ ಸ್ಪರ್ಧೆ ಈ ಎರಡು ತಂಡಗಳ ನಡುವೆ ಪ್ರಶಸ್ತಿಗಾಗಿ ನಡೆಯಲಿದೆ.

ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಟೂರ್ನಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕ್ಲಬ್ನ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಖಜಾಂಜಿ ಚೀಯಂಡಿ ದಿನೇಶ್ , ಸಹಕಾರ್ಯದರ್ಶಿ ಮಚ್ಚುರ ಯದುಕುಮಾರ್, ಹೊಸೊಕ್ಲು ಮಾಚಯ್ಯ ಹಾಗೂ ನಿರ್ದೇಶಕರು ಮತ್ತು ಕ್ರೀಡಾ ಪ್ರೇಮಿಗಳು ಪಾಲ್ಗೊಂಡಿದ್ದರು.

ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಂ, ಕರವಂಡ ಸೀಮಾ ಗಣಪತಿ ಕಾರ್ಯ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-51-1794164020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.