ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಉರಿಬಿಸಿಲು ಇದ್ದರೆ, ಮಧ್ಯಾಹ್ನದ ನಂತರ ಸುರಿದ ಮಳೆ ತಂಪನೆರೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಆಗಮಿಸಿದ್ದರು.

ಮಳೆಯಿಂದಾಗಿ ಕೆಲವು ಪಂದ್ಯಗಳನ್ನು ಮುಂದೂಡಲಾಯಿತು. ಆದರೆ, ಮಳೆಯಿಂದ ಬಿಸಿಲ ಬೇಗೆ ಕೊಂಚ ತಣಿಯಿತು. ಭಾನುವಾರದ ಪಂದ್ಯಗಳಲ್ಲಿ ಪೂಣಚ್ಚ ಹಾಗೂ ಲೇಖನ್ ಅಪ್ಪಚ್ಚು ಅವರು ತಲಾ 3 ಗೋಲು ಗಳಿಸಿ ಮಿಂಚಿದರು. ಮಾತ್ರವಲ್ಲ, ತಮ್ಮ ತಮ್ಮ ತಂಡಗಳ ಗೆಲುವಿಗೆ ಕಾರಣರಾದರು.

ಪೂಣಚ್ಚ ಅವರ 3 ಹಾಗೂ ತರುಣ್ ಮಾಚಯ್ಯ ಅವರ ಒಂದು ಗೋಲಿನಿಂದ ನೆರವಿನಿಂದ ಮುಕ್ಕಾಟಿರ (ಪುಲಿಕೋಟು ) 4-1ರಿಂದ ಶಾಂತೆಯಂಡ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿತು.

ಇದೇ ರೀತಿ ಲೇಖನ್ ಅಪ್ಪಚ್ಚು ಅವರು ಗಳಿಸಿದ 3 ಗೋಲುಗಳು ಹಾಗೂ ಗೌತಮ್ ಗಳಿಸಿದ 1 ಗೋಲಿನ ನೆರವಿನಿಂದ ಕೊಲ್ಲಿರ 4-1ಯಿಂದ ಚೆಂಗಲಂಡ ವಿರುದ್ಧ ಜಯ ಸಾಧಿಸಿತು.

ಇನ್ನು ಪ್ರೇಕ್ಷಕರ ಭಾರಿ ಕುತೂಹಲಕ್ಕೆ ಕರೋಟಿರ ಮತ್ತು ನಾಯಕಂಡ, ಮುಕ್ಕಾಟಿರ (ಮೂವತ್ತೊಕ್ಲು) –ಮಾಚಂಡ ಹಾಗೂ ನಾಗಂಡ– ತೀತಿಮಾಡ ಪಂದ್ಯಗಳು ಕಾರಣವಾಗಿದ್ದವು.

ಅಂತಿಮವಾಗಿ ಟೈಬ್ರೇಕರ್ನಲ್ಲಿ ಕರೋಟಿರ 5–4ರಿಂದ ನಾಯಕಂಡ ವಿರುದ್ಧ; ಮುಕ್ಕಾಟಿರ (ಮೂವತ್ತೊಕ್ಲು) 2-1 ರಿಂದ ಮಾಚಂಡ ವಿರುದ್ಧ ಹಾಗೂ ನಾಗಂಡ 2-0 ರಿಂದ ತೀತಿಮಾಡ ವಿರುದ್ಧ ಗೆಲುವು ಸಾಧಿಸುವಲ್ಲಿ ಸಫಲವಾದವು.

ಉಳಿದಂತೆ, ಚಂದುರ 1-0 ರಿಂದ ಮಾಚಮಂಡ ವಿರುದ್ಧ; ಅಪ್ಪನೆರವಂಡ 3-2ರಿಂದ ಚಿಂಡಮಾಡ ವಿರುದ್ಧ; ಬಿದ್ದಾಟಂಡ 4-0ರಿಂದ ಮಲ್ಲಜ್ಜಿರ ವಿರುದ್ಧ; ಮಣವಟ್ಟಿರ 3-1ರಿಂದ ಅಲ್ಲಪಂಡ ವಿರುದ್ಧ; ನಾಪಂಡ 2-0ಯಿಂದ ಚೌರೀರ ವಿರುದ್ಧ; ಸೋಮೆಯಂಡ 3-0ಯಿಂದ ಮಳವಂಡ ವಿರುದ್ಧ ಹಾಗೂ ನೆರವಂಡ 4-0ಯಿಂದ ಮಾದೆಯಂಡ ವಿರುದ್ಧ ಗೆಲುವು ಪಡೆದವು. ಮುಕ್ಕಾಟಿರ (ಹರಿಹರ ) 2-0 ಅಂತರದಿಂದ ಐತಿಚಂಡ ವಿರುದ್ಧ; ಬೊಟ್ಟೋಳಂಡ 1-0ರಿಂದ ಸುಳ್ಳಿಮಾಡ ವಿರುದ್ಧ; ಅರಮನೆಮಾಡ 1-0ರಿಂದ ಉದ್ದಿನಡಂಡ ವಿರುದ್ಧ; ನಂದೇಟಿರ 1-0ರಿಂದ ಪಾಲೆಕಂಡ ವಿರುದ್ಧ ಗೆಲುವು ಸಾಧಿಸಿದವು.

ಮಧ್ಯಾಹ್ನದವರೆಗಿನ ಬಿಸಿಲು ಪಂದ್ಯಗಳ ಕಾವನ್ನು ಹೆಚ್ಚಿಸಿದರೆ ಮಧ್ಯಾಹ್ನ ಸುರಿದ ಮಳೆ ಐದು ಪಂದ್ಯಗಳಿಗೆ ಅಡ್ಡಿಯಾಯಿತು. ತಂಡಗಳ ನಡುವಿನ ಪಂದ್ಯಗಳು ಏಪ್ರಿಲ್ 21ರಂದು ನಡೆಯಲಿವೆ ಎಂದು ಕ್ರೀಡಾಕೂಟದ ನಿರ್ದೇಶಕ ನಾಯಕಂಡ ದೀಪುಚಂಗಪ್ಪ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-51-529224575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.