ನಾಪೋಕ್ಲು: ಶಿಬಿರದಲ್ಲಿ ಪಾಲ್ಗೊಳ್ಳುವುದಷ್ಟೇ ಮುಖ್ಯವಲ್ಲ, ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಕೂಡ ಅಗತ್ಯ ಎಂದು ಹಾಕಿ ಕರ್ನಾಟಕ ತರಬೇತುದಾರ ಹಾಗೂ ಬ್ಯಾಂಕ್ ಉದ್ಯೋಗಿ ಕಾಂಡಂಡ ಅಪ್ಪಣ್ಣ ಹೇಳಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಕೆಪಿಎಸ್ ಕನ್ನಡ ಮಾಧ್ಯಮ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿರುವ 26ನೇ ವರ್ಷದ ಹಾಕಿ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಶಿಸ್ತು ಹಾಗೂ ವಿನಯದಿಂದ ವರ್ತಿಸುವಂತೆ ಹಾಗೂ ತರಬೇತಿಯ ಸಂದರ್ಭ ಏಕಾಗ್ರತೆಯಿಂದ ತರಬೇತಿದಾರರು ಹೇಳುವುದನ್ನು ಪಾಲಿಸುವಂತೆ ಮಕ್ಕಳಿಗೆ ತಿಳಿ ಹೇಳಿದರು. ವಿದ್ಯಾರ್ಥಿಗಳು ರಜಾ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಬಿರದಲ್ಲಿ ಪಾಲ್ಗೊಂಡು ಒತ್ತಡಕ್ಕೆ ಒಳಗಾಗಬಾರದು. ಸಂತೋಷದಿಂದ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಇದೇ ಮೈದಾನದಲ್ಲಿ ಆಟವಾಡಿದ, ತರಬೇತಿ ಹೊಂದಿದ ಹಲವು ಕ್ರೀಡಾಪಟುಗಳು ಉನ್ನತ ಸ್ಥಾನದಲ್ಲಿದ್ದಾರೆ. ಹಿಂದೆ ಪ್ರತಿಭೆ ಗುರುತಿಸುವ ಕೆಲಸ ಆಗುತ್ತಿರಲಿಲ್ಲ. ಈಗ ಸಂಘ ಸಂಸ್ಥೆಗಳು ವಿವಿಧ ಕ್ರೀಡೆಗಳ ತರಬೇತಿಯನ್ನು ನೀಡುತ್ತಿವೆ. ಹಾಕಿ, ಕ್ರಿಕೆಟ್, ಅಥ್ಲೆಟಿಕ್ಸ್ ಯಾವುದೇ ವಿಭಾಗದಲ್ಲಿ ಗುರಿ ಇರಿಸಿ ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರಬೇಕು. ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಫೀಲ್ಡ್ ಮಾರ್ಷಲ್ ಕ್ರೀಡಾ ಅಕಾಡೆಮಿಯ ಅಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, ಅಕಾಡೆಮಿ ಸ್ಥಾಪಕ ಅಧ್ಯಕ್ಷ ದಿವಂಗತ ಕಲಿಯಂಡ ಸಾಬು ಅಯ್ಯಣ್ಣ ಅವರ ಅವಿರತ ಶ್ರಮದಿಂದ ಸ್ಥಾಪನೆಗೊಂಡ ಈ ಅಕಾಡೆಮಿ 26 ವಸಂತಗಳನ್ನು ಕಂಡಿದ್ದು, ಇಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಸ್ಥಾನಮಾನಗಳನ್ನು ಪಡೆದಿದ್ದಾರೆ ಎಂದರು.

ಹಾಕಿ ತರಬೇತಿ ಒಂದನ್ನೇ ದೃಷ್ಟಿಯಲ್ಲಿರಿಸಿಕೊಂಡು ಶಿಬಿರಕ್ಕೆ ಬರಬಾರದು. ವಿದ್ಯಾರ್ಥಿಗಳು ಆಸಕ್ತಿ ಇರುವ ಯಾವುದೇ ಕ್ರೀಡೆಯಲ್ಲಿ ಪರಿಣತಿ ಹೊಂದಬೇಕು ಎಂದರು.

ಅಕಾಡೆಮಿಯ ಉಪಾಧ್ಯಕ್ಷ ಕೊಂಡಿರ ಗಣೇಶ್ ಮಾತನಾಡಿ ವಿದ್ಯಾರ್ಥಿಗಳು ಮೇಲ್ಮಟ್ಟದ ಗುರಿಯಿರಿಸಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಇಂದು ಕ್ರೀಡೆಗೆ ತುಂಬಾ ಉತ್ತೇಜನ ಇದೆ. ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಗುರಿ ಇರಿಸಿಕೊಂಡು ಅಭ್ಯಾಸ ಮಾಡಬೇಕು ಎಂದರು.

ದಂತ ವೈದ್ಯ ಕೆಲೇಟಿರ ಬೋಪಣ್ಣ ಮಾತನಾಡಿದರು. ಮಾಜಿ ಸೈನಿಕ ಕೂಟೋಳಿರ ಡಾಲಿ ಅಚ್ಚಪ್ಪ, ಹಿರಿಯ ನಿರ್ದೇಶಕರಾದ ದುಗ್ಗಳ ಸದಾನಂದ, ಕುಂಚೆಟೀರ ಸುದೀ ಉತ್ತಪ್ಪ, ತರಬೇತುದಾರರಾದ ಅರೇಯಡ ಬೆಳ್ಳಿಯಪ್ಪ (ಗಣೇಶ) ಬಿದ್ದಾಟಂಡ ಮಮತಾ ಚಿನ್ನಪ್ಪ ಹಾಗೂ ಪೋಷಕರಾದ ಪಾಡಿಯಮಂಡ ಗಾಯತ್ರಿ, ಚೇರುವಾಳಂಡ ದೀನಾ, ಬೋಟೋಳಂಡ ವಿವೇಕ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-256401067

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.