ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೊಡವ ಕೌಟುಂಬಿಕ ಹಾಕಿಯ 26ನೇ ಆವೃತ್ತಿಯ ಟೂರ್ನಿಯಲ್ಲಿ ಗೋಲುಗಳ ಸುರಿಮಳೆಯಂತೆ ದಾಖಲಾದವು.

ಅದರಲ್ಲೂ ಮಾಣಿಪಂಡ ತಂಡವು ಬೊದ್ದಂಡ ವಿರುದ್ಧ 7-0 ಅಂತರದಿಂದ ಹಾಗೂ ಬಡುವಮಂಡ ತಂಡವು ಬಡುವಂಡ ತಂಡದ ವಿರುದ್ಧ 7-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದವು.

ಬಾರಿಯಂಡ ತಂಡವು ಬಲಿಯಂಡ ವಿರುದ್ಧ ಹಾಗೂ ಅಳಮೆಂಗಡ ತಂಡವು ಚೆಟ್ಟಂಗಡ ವಿರುದ್ಧ 6-0 ಅಂತರದಿಂದ ಭಾರಿ ಗೆಲುವು ಪಡೆದವು. ದಾಖಲಾದ ಗೋಲುಗಳು ಪ್ರೇಕ್ಷಕರಿಗೆ ರಸದೌತಣ ನೀಡಿತು.

ಮರುವಂಡ ತಂಡ ಅಯ್ಯಮಂಡ ನಡುವಿನ ಪಂದ್ಯವು ಪ್ರೇಕ್ಷಕರನ್ನು ತುದಿಗಾಲ ಮೇಲೇರಿಸಿತು. ಮರುವಂಡ 3- 2 ಅಂತರದಿಂದ ಗೆಲುವು ಸಾಧಿಸಿತು.

ಉಳಿದ ಪಂದ್ಯಗಳಲ್ಲೂ ಹೆಚ್ಚಿನ ತುರುಸಿನ ಸ್ಪರ್ಧೆ ಕಂಡು ಬರಲಿಲ್ಲ. ಕೊಕ್ಕಂಡ ತಂಡವು ಮಾದಂಡ ವಿರುದ್ದ 4 -0 ರಲ್ಲಿ, ಚೊಟ್ಟೆಯನಮಾಡ ತಂಡವು ತಾತಂಡ ವಿರುದ್ಧ 3 -0ರಲ್ಲಿ, ಪಾಲಚಂಡ ಪೂಲಂಡ ವಿರುದ್ಧ 4-0ರಲ್ಲಿ, ಚಂದುರ ತಂಡವು ಮೂಕಳೇರ ವಿರುದ್ಧ 2-1 ರಲ್ಲಿ, ಬಲ್ಲಚಂಡ ತಂಡವು ಚಂದಪಂಡವಿರುದ್ಧ 4-1ರಲ್ಲಿ ಗೆಲುವು ಸಾಧಿಸಿದವು.

ಮೊಣ್ಣಂಡ ಮತ್ತು ಪುತ್ತರೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪುತ್ತರೀರ ತಂಡ ಟೈಬ್ರೇಕರ್ ನಲ್ಲಿಗೆಲುವು ಸಾಧಿಸಿತು.

ಹಂಚಟ್ಟಿರ ಮತ್ತು ಅಲ್ಲುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲುಮಾಡ 1-0 ಅಂತರದ ಗೆಲುವು ಸಾಧಿಸಿತು.

ಬೈರಜಂಡ ಮತ್ತುಪೊನ್ನಚಂಡ ತಂಡಗಳ ನಡೆದ ಪಂದ್ಯದಲ್ಲಿ ಪೊನ್ನಚಂಡ ಜಯ ಸಾಧಿಸಿತು. ಕುಟ್ಟಂಡ ತಂಡವು ವಾಕ್ ಓವರ್ ನಲ್ಲಿ ಮುಂದಿನ ಸುತ್ತು ಪ್ರವೇಶಿಸಿತು.

ಮಾಚಂಗಡ ಮತ್ತು ಕುಟ್ಟೆಟ್ಟಿರ ತಂಡಗಳ ನಡೆದ ಪಂದ್ಯದಲ್ಲಿ ಮಾಚಂಗಡ 3-0 ಅಂತರದ ಗೆಲುವು ಸಾಧಿಸಿತು. ಅಜ್ಜಿನಿಕಂಡ ಮತ್ತು ಬಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಬಟ್ಟೀರತಂಡ ಜಯ ಸಾಧಿಸಿತು.

ಬೊಟ್ಟಂಗಡ ಕೆಚೆಟ್ಟಿರ ವಿರುದ್ಧ 2-0 ಅಂತರದಿಂದ, ಅಚ್ಚಪಂಡ ಕೂಪದಿರ ವಿರುದ್ಧ 4-1 ಅಂತರದಿಂದ, ಮಾಚಮಂಡ ಮಾಲೇಟಿರ (ಕುಕ್ಲೂರ್) ವಿರುದ್ಧ 3-0 ಅಂತರದಿಂದ, ಅಮ್ಮಾಟಂಡ ಕೊರವಂಡ ವಿರುದ್ದ 1-0 ಅಂತರದಲ್ಲಿ ಸಾಧಿಸಿತು. ಮಾಲೇಟಿರ ವಾಕ್ ಓವರ್ನಿಂದಾಗಿ ಮುಂದಿನ ಸುತ್ತು ಪ್ರವೇಶಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-871547177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.