ನಾಪೋಕ್ಲು: ಸಂತೋಷ್ ಅವರ ಆಟದ ಬಲದಿಂದ ಕೂತಂಡ ತಂಡದವರು ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಕಾರೇರ ತಂಡದ ವಿರುದ್ಧ 6–0ಯಿಂದ ಭರ್ಜರಿ ಜಯ ಸಾಧಿಸಿದರು.

ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂತೋಷ್ ಎರಡು ಗೋಲು ಹೊಡೆದರು. ಅವರೊಂದಿಗೆ ನರೇನ್ ಬೋಪಣ್ಣ, ಸೋಮಣ್ಣ, ಪೂಣಚ್ಚ ಹಾಗೂ ಸಜನ್ ದೇವಯ್ಯ ತಲಾ ಒಂದು ಗೋಲು ಬಾರಿಸಿದರು.

ಅಂಜಪರವಂಡ ತಂಡದವರು 2-0ಯಿಂದ ಮುಂಡಿಯೋಳಂಡ ವಿರುದ್ಧ; ಚೇಂದೀರ ತಂಡದವರು 3-1ರಿಂದ ಕೋಟೆರ ವಿರುದ್ಧ; ಕನ್ನಂಡ 2-1ರಿಂದ ಮೇವಡ ವಿರುದ್ಧ ಜಯ ಗಳಿಸಿದರು.

ಪಾಡೆಯಂಡ ಮತ್ತು ಕಾಯಪಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಅಂತಿಮವಾಗಿ, ಪಾಡೆಯಂಡ ತಂಡದವರು 4-3ರಿಂದ ಟೈಬ್ರೇಕರ್ನಲ್ಲಿ ಗೆದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-51-1042010927

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.