ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಸೋಮವಾರ ಚೆರುವಾಳಂಡ ಮತ್ತು ಮಚ್ಚಮಾಡ ಹಾಗೂ ಕಲ್ಯಾಟಂಡ ಮತ್ತು ಬಡುವಮಂಡ ನಡುವಿನ ಪಂದ್ಯಗಳು ಪ್ರೇಕ್ಷಕರನ್ನು ಅಕ್ಷರಶಃ ತುದಿಗಾಲಿನಲ್ಲಿರಿಸಿದವು.

ಎರಡೂ ಪಂದ್ಯಗಳಲ್ಲಿ ಸಮಬಲದ ಹೋರಾಟ ಕಂಡು ಬಂತು. ಅಂತಿಮವಾಗಿ ಗೆಲವಿಗಾಗಿ ಟೈಬ್ರೇಕರ್ ಮೊರೆ ಹೋಗಲಾಯಿತು. ಟೈಬ್ರೇಕರ್ನಲ್ಲೂ ಚೆರುವಾಳಂಡ ಮತ್ತು ಮಚ್ಚಮಾಡ ನಡುವೆ ತೀವ್ರ ಪೈಪೋಟಿ ಕಂಡು ಬಂತು. ಅಂತಿಮವಾಗಿ ಮಚ್ಚಮಾಡ ತಂಡ ಚೆರುವಾಳಂಡವಿರುದ್ಧ 5-4 ರಲ್ಲಿ ಜಯಸಾಧಿಸಿ ನಿಟ್ಟುಸಿರು ಬಿಟ್ಟಿತು.

ಇದೇ ಬಗೆಯಲ್ಲಿ ಟೈಬ್ರೇಕರ್ನಲ್ಲಿ ಕಲ್ಯಾಟಂಡ ತಂಡ 4-2ರಲ್ಲಿ ಬಡುವಮಂಡ ವಿರುದ್ಧ ಗೆಲುವು ಪಡೆಯಿತು.

ಮಾಚಿಮಂಡ, ನಂಬುಡುಮಾಡ, ಬಿದ್ದಂಡ, ಬಲ್ಲಚಂಡ,ಕುಪ್ಪಂಡ ನಾಂಗಾಲ, ಅಮ್ಮಣಿಚಂಡ ತಂಡಗಳಿಗೆ ಭಾರಿ ಅಂತರದ ಜಯ ಒಲಿಯಿತು.

ಮಾಚಿಮಂಡ 6-0ಯಿಂದ ಕೇಟೋಳಿರ ವಿರುದ್ಧ; ನಂಬುಡುಮಾಡ 5-0 ಯಿಂದ ಚೇಂದ್ರಿಮಾಡ(ಬಲ್ಯಮನೆ) ವಿರುದ್ಧ; ಬಿದ್ದಂಡ 6-1ರಿಂದ ಕೈಪಟ್ಟೀರ ವಿರುದ್ಧ; ಬಲ್ಲಚಂಡ 5-0 ಯಿಂದ ಪಟ್ಟಡ ವಿರುದ್ಧ; ಕುಪ್ಪಂಡ (ನಾಂಗಾಲ) 5-1ರಿಂದ ಚೆರಿಯಂಡ ವಿರುದ್ಧ; ಅಮ್ಮಣಿಚಂಡ 5-0ಯಿಂದ ಮುಂಡಂಡ ವಿರುದ್ಧ ಭರ್ಜರಿ ಗೆಲುವು ಸಾಧಿಸಿದವು.

ಉಳಿದಂತೆ, ನೆರವಂಡ 4-0ಯಿಂದ ಕಾಂಗೀರ ವಿರುದ್ಧ; ಅಪ್ಪನೆರವಂಡ 3-0ಯಿಂದ ಅಪ್ಪುಮಣಿಯಂಡ ವಿರುದ್ಧ; ಮೇಚಿಯಂಡ 2-1ರಿಂದ ಮತ್ತು ಕೋಡಿರ ವಿರುದ್ಧ; ಕೋದಂಡ 1-0ಯಿಂದ ಮೂವೇರ ವಿರುದ್ಧ; ಮೇಚಂಡ 3-0ಯಿಂದ ಬಟ್ಟೀರ ವಿರುದ್ದ; ಉದ್ದಿನಾಡಂಡ 3-1ಯಿಂದ ಅಮ್ಮಾಟಂಡ ವಿರುದ್ಧ; ಕರವಟ್ಟೀರ 1-0ಯಿಂದ ಚೋಕಿರ ವಿರುದ್ಧ; ಮುರುವಂಡ 3-0ಯಿಂದ ಐನಂಡ ವಿರುದ್ಧ; ಕಲಿಯಂಡ 2-0ಯಿಂದ ಕಲ್ಕಂಡ ವಿರುದ್ಧ; ಪುಟ್ಟಿಚಂಡ 4-0ಯಿಂದ ಅನ್ನಡಿಯಂಡ ವಿರುದ್ಧ; ತೀತಿಮಾಡ 3-1ಯಿಂದ ಮತ್ತು ತೆಕ್ಕಡ ವಿರುದ್ಧ ಗೆಲುವು ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-51-1202460727

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.