ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿನ ಮಹಿಳೆಯರ 5ಎ ಹಾಕಿಯಲ್ಲಿ ಬುಧವಾರ ಕಂಬೀರಂಡ ಮತ್ತು ಕೇಚೆಟ್ಟಿರ ತಂಡಗಳು ಫೈನಲ್ಸ್ ತಲುಪಿವೆ. ಉಭಯ ತಂಡಗಳ ನಡುವೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಫೈನಲ್ಸ್ ಪಂದ್ಯ ನಡೆಯಲಿದೆ.

ಬುಧವಾರ ನಡೆದ ಸೆಮಿಫೈನಲ್ಸ್ ಪಂದ್ಯಗಳಲ್ಲಿ ತೇಜಸ್ವಿ ದೇವಯ್ಯ ಹಾಗೂ ಲಕ್ಷ್ಯ ಪೊನ್ನಕ್ಕ ಅವರು ಗಳಿಸಿದ ತಲಾ 2 ಗೋಲುಗಳ ನೆರವಿನಿಂದ ಕೇಚೆಟ್ಟಿರ 4-0ಯಿಂದ ಶಿವಚಾಳಿಯಂಡ ವಿರುದ್ಧ ಗೆಲುವು ಸಾಧಿಸಿ ಫೈನಲ್ಸ್ ಪ್ರವೇಶಿಸಿತು.

ನವ್ಯಾ ಪೊನ್ನಮ್ಮ, ಹನಾ ಅಪ್ಪಯ್ಯ ಹಾಗೂ ಮಿಲನಾ ಪ್ರಕಾಶ್ ಅವರು ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ ಕಂಬೀರಂಡ 3-0 ಯಿಂದ ಅದೇಂಗಡ ವಿರುದ್ಧ ಗೆಲುವು ಸಾಧಿಸಿ ಫೈನಲ್ಸ್ ಪ್ರವೇಶಿಸಿತು.

ಇಂದು ವೈವಿಧ್ಯಮಯ ಕಾರ್ಯಕ್ರಮಗಳು: ಗುರುವಾರ ರಾತ್ರಿ ಡಿ.ಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಕ್ಕಬ್ಬೆಯಿಂದ ಹಾಕಿ ಮೈದಾನದವರೆಗೆ 10 ಕಿ.ಮೀ ಮ್ಯಾರಥಾನ್ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ.

ಕುಟುಂಬವಾರು ನಡೆಯುವ ಈ ಸ್ಪರ್ಧೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ಭಾಗವಹಿಸಬಹುದಾಗಿದ್ದು ನಿಗದಿತ ಪಾಯಿಂಟ್ನಿಂದ ಇಬ್ಬರು ಜೋಡಿಯಾಗಿ ಓಡಬೇಕು. ಮೊದಲ ಹಂತ 3.5 ಕಿ.ಮೀ. ಎರಡನೇ ಹಂತ 3.5 ಕಿ.ಮೀ. ಹಾಗೂ ಕೊನೆಯ ಹಂತ 3 ಕಿ.ಮೀ ಆಗಿರುತ್ತದೆ. ಒಂದು ಗುರಿಯನ್ನು ಇಬ್ಬರು ತಲುಪಿದ ಬಳಿಕವಷ್ಟೇ ಮತ್ತೆ ಮುಂದುವರಿಯಬಹುದಾಗಿದೆ.

ಮಹಿಳೆಯರ ಹಾಕಿ ಫೈನಲ್ಸ್ ಪಂದ್ಯದ ಮುಖ್ಯ ಅತಿಥಿಗಳಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತಅಧಿಕಾರಿ ಕನ್ನಂಡ ರಾಧಿಕಾ ಕರುಂಬಯ್ಯ, ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ.

ವಿಶೇಷತೆಗಳು: ಚೇನಂಡ ಹಾಕಿ ಟೂರ್ನಿಯ ನಿರ್ದೇಶಕರಾಗಿ ನಾಯಕಂಡ ದೀಪು ಕಾರ್ಯನಿರ್ವಹಿಸುತ್ತಿದ್ದಾರೆ. ಯೋಧ ಚೇಯಂಡ ಅಪ್ಪಚ್ಚು ಅಂಪೈರ್ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೇನಂಡ ಹಾಕಿ ಹಬ್ಬದಲ್ಲಿ 33 ತೀರ್ಪುಗಾರರಿದ್ದು, ಇವರಲ್ಲಿ 3 ಮಹಿಳೆಯರು ಹಾಗೂ 30 ಪುರುಷರ ತೀರ್ಪುಗಾರರಿದ್ದಾರೆ. ಚೇನಂಡ ಹಾಕಿ ಹಬ್ಬವನ್ನು ರಾಷ್ಟ್ರೀಯ ತೀರ್ಪುಗಾರರು ಹಾಗೂ ಅನುಭವಸ್ಥ ಹಿರಿಯ ಆಟಗಾರರು ನಡೆಸಲು ಸಾಥ್ ನೀಡುತ್ತಾ ಬರುತ್ತಿದ್ದಾರೆ. ನಾಯಕಂಡ ದೀಪಕ್ ಚಂಗಪ್ಪ, ಚೆಯ್ಯಂಡ ಲವ ಅಪ್ಪಚ್ಚು, ಚೆಂದಪಂಡ ಆಕಾಶ್ ಚಂಗಪ್ಪ, ಕುಪ್ಪಂಡ ದಿಲನ್ ಬೋಪಣ್ಣ, ಕರವಂಡ ಅಪ್ಪಣ್ಣ, ಮೂಕಚಂಡ ನಿರನ್ ನಾಚಪ್ಪ, ಬಲ್ಲಚಂಡ ನಾಣಯ್ಯ, ಅಪ್ಪಚೊಟ್ಟೋಳಂಡ ಅಯ್ಯಪ್ಪ, ಕೊಂಡೀರ ಕೀರ್ತಿ, ಬೊಟ್ಟಂಗಡ ಕೌಶಿಕ್, ಪಟ್ರಪಂಡ ಸಚಿನ್ ಮಂದಣ್ಣ ತೀರ್ಪುಗಾರರರಲ್ಲಿ ಪ್ರಮುಖರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-51-1350370867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.