ನಾಪೋಕ್ಲು (ಕೊಡಗು ಜಿಲ್ಲೆ): ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಸೋಮವಾರಮೇರಿಯಂಡ– ಮಂಡೇಟಿರ, ಸಣ್ಣುವಂಡ –ಕುಮ್ಮಂಡ, ಮೇಕೆರಿರ– ಕಾಂಗಂಡ ನಡುವಿನ ಪಂದ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೇರಿಸಿದವು.

ಈ ಮೂರೂ ಪಂದ್ಯಗಳಲ್ಲೂ ಎಲ್ಲ ತಂಡಗಳೂ ಸಮಬಲ ಸಾಧಿಸಿದವು. ಟೈಬ್ರೇಕರ್ನಲ್ಲೂ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದು, ಪ್ರೇಕ್ಷಕರು ಕುತೂಹಲದಿಂದ ಕೊನೆಯ ಕ್ಷಣದವರೆಗೂ ವೀಕ್ಷಿಸುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಅಂತಿಮವಾಗಿ ಟೈ ಬ್ರೇಕರ್ನಲ್ಲಿ ಮೇರಿಯಂಡ 5-4 ರಿಂದ ಮಂಡೇಟಿರ ವಿರುದ್ಧ; ಸಣ್ಣುವಂಡ 2-1ರಿಂದ ಕುಮ್ಮಂಡ ವಿರುದ್ಧ; ಮೇಕೆರಿರ 4-3ರಿಂದ ಕಾಂಗಂಡ ವಿರುದ್ಧ ಜಯ ಗಳಿಸಿ ನಿಟ್ಟಿಸಿರು ಬಿಟ್ಟವು.

ಇನ್ನು ರಂಜನ್ ಅಯ್ಯಪ್ಪ ಅವರ 3 ಗೋಲಿನ ನೆರವಿನಿಂದ ಪರದಂಡ 4-1ರಿಂದ ನಂಬುಡುಮಾಡ ವಿರುದ್ಧ ಗೆಲುವು ಸಾಧಿಸಿತು.

ಪುದಿಯೊಕ್ಕಡ ತಂಡವು 5-1ರಿಂದ ಮರುವಂಡ ವಿರುದ್ಧ ಭರ್ಜರಿ ಗೆಲುವು ಸಾಧಿಸುವಲ್ಲಿ ಪುದಿಯೊಕ್ಕಡ ಪರ ಪ್ರಧಾನ್ ಸೋಮಣ್ಣ ಅವರು ಗಳಿಸಿದ 3 ಗೋಲುಗಳು ನೆರವಿಗೆ ಬಂದವು.

ಬೊಳ್ಳೇಪಂಡ 3-0 ರಿಂದ ಮಂದೆಯಡ ವಿರುದ್ಧ ಗೆಲುವು ಸಾಧಿಸುವಲ್ಲಿ ಗ್ಯಾನ್ ಗಣಪತಿ 3 ಗಳಿಸಿದ್ದು ಸಹಾಯಕವಾಯಿತು. ಹೀಗೆ, ವೈಯಕ್ತಿಕ ನೆಲೆಗಟ್ಟಿನಲ್ಲಿ ಹಲವು ಆಟಗಾರರು 2 ಹಾಗೂ 3 ಗೋಲುಗಳನ್ನು ಗಳಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದು ವಿಶೇಷ ಎನಿಸಿತ್ತು.

ಉಳಿದಂತೆ, ಮಂಡೇಟಿರ 3-0ರಿಂದ ಕೈಬುಲಿರ ವಿರುದ್ಧ; ಮಚ್ಚಾರಂಡ 1-0ರಿಂದ ನಾಳಿಯಂಡ ವಿರುದ್ಧ; ಮಂಡೇಪಂಡ 3-0ಯಿಂದ ಕಡೇಮಡ ವಿರುದ್ಧ; ಕಾಡ್ಯಮಾಡ 1-0ಯಿಂದ ತೀತಿಮಾಡ ವಿರುದ್ಧ, ಇಟ್ಟೀರ 1-0 ಯಿಂದ ಐಚಂಡ ವಿರುದ್ಧ; ಐಚೆಟ್ಟೀರ 1-0ರಿಂದ ಅಲೇಮಾಡ ವಿರುದ್ದ; ಕುಪ್ಪಂಡ (ನಾಂಗಾಲ) 2-0ಯಿಂದ ಪಂದ್ಯಂಡ ವಿರುದ್ಧ; ಚೇಂದಂಡ 1-0ಯಿಂದ ಮುಕ್ಕಾಟಿರ (ಕಡಗದಾಳು) ವಿರುದ್ಧ; ಕಾಳೇರ 2-0 ಯಿಂದ ಮಾಚಿಮಂಡ ವಿರುದ್ದ; ಕೊಂಗಂಡ 2-0ರಿಂದ ಮುಕ್ಕಾಟಿರ (ಬೋಂದ) ವಿರುದ್ದ; ಪಟ್ಟಚೆರುವಾಳಂಡ 2-0ರಿಂದ ಕುಂದೀರ ವಿರುದ್ಧ; ಮೂಕೊಂಡ 4-0 ರಿಂದ ಚಿಮ್ಮಣಮಾಡ ವಿರುದ್ಧ ಗೆಲುವು ಸಾಧಿಸಿದವು. ಎದುರಾಳಿ ತಂಡಗಳು ಒಂದು ಗೋಲೂ ಗಳಿಸಲೂ ಅವಕಾಶ ನೀಡದೇ ಇದ್ದದ್ದು ವಿಶೇಷ ಎನಿಸಿತ್ತು.

ನೆಲ್ಲಮಕ್ಕಡ ತಂಡ ವಾಕ್ ಓವರ್ ಪಡೆಯಿತು. ಮಳೆಯಿಂದಾಗಿ ಕಾಯಪಂಡ ಮತ್ತು ಪಾಡೆಯಂಡ ತಂಡಗಳ ನಡುವಿನ ಪಂದ್ಯವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-345735519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.