ಪಡುಬಿದ್ರಿ: ಕರಾವಳಿಯಲ್ಲಿ ಮೊದಲ ಬಾರಿಗೆ ಮುಸ್ಸಂಜೆಯಿಂದ ಬೆಳಿಗ್ಗೆವರೆಗೆ ನಡೆದ 12 ಗಂಟೆಗಳ ಓಟವು ವಿಶೇಷವಾಗಿ ಗಮನ ಸೆಳೆಯಿತು.

ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ನಿಂದ ಮಲ್ಪೆ ಬೀಚ್ವರೆಗೆ ನಡೆದ ಈ ಮ್ಯಾರಥಾನ್ ಸ್ಪರ್ಧೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ವಿಭಿನ್ನ ಅನುಭವವನ್ನು ಮೂಡಿಸಿತು.

ಡಸ್ಕ್ ಟು ಡಾನ್ ಧ್ಯೇಯವಾಕ್ಯದೊಂದಿಗೆ ಪಡುಬಿದ್ರಿ ಬೀಚ್ನಲ್ಲಿ ಶನಿವಾರ ಮುಸ್ಸಂಜೆ ಹೊತ್ತಲ್ಲಿ ಅಲ್ಟ್ರಾ ಮ್ಯಾರಥಾನ್ ನಡೆಯಿತು. ಓಡು ರನ್ನಿಂಗ್ ಕ್ಲಬ್, ಉಡುಪಿ ರನ್ನಿಂಗ್ ಕ್ಲಬ್ ಮತ್ತು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಪಡುಬಿದ್ರಿ ಮುಖ್ಯ ಬೀಚ್ನಿಂದ ಮಲ್ಪೆಯ ಪಡುಕೆರೆಯವರೆಗೆ ನಡೆದ ಮ್ಯಾರಥಾನ್ನಲ್ಲಿ 25 ಸ್ಪರ್ಧಿಗಳು ಭಾಗವಹಿಸಿದ್ದು, ಬಳಿಕ ಆರಂಭಗೊಂಡ 50 ಕಿ.ಮೀ ಮ್ಯಾರಥಾನ್ನಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ 60 ಮಂದಿ ಪಾಲ್ಗೊಂಡರು. ಇದಲ್ಲದೆ 21 ಕಿ.ಮೀ, 10 ಕಿ.ಮೀ, 5 ಕಿ.ಮೀ ಹಾಗೂ 3 ಕಿ.ಮೀ ವಿಭಾಗಗಳಲ್ಲಿ ಒಟ್ಟು 1,200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ಪ್ರಮುಖ ಆಕರ್ಷಣೆ: ಬೆಂಗಳೂರಿನ 64 ವರ್ಷ ವಯಸ್ಸಿನ ಅಭಿರಾಮ್ ಸಜೀವನ್ 12 ಗಂಟೆಗಳ ಮ್ಯಾರಥಾನ್ನ ಪ್ರಮುಖ ಆಕರ್ಷಣೆಯಾಗಿದ್ದರೆ, 21 ಕಿ.ಮೀ ಓಟದಲ್ಲಿ ಮಂಚಕಲ್ ಮೂಲದ 75 ವರ್ಷ ವಯಸ್ಸಿನ ಸುಲತಾ ಕಾಮತ್ ಭಾಗವಹಿಸಿ ಯುವಕರಿಗೂ ಮಾದರಿಯಾದರು.

ಫಲಿತಾಂಶ: ಪುರುಷರ ವಿಭಾಗದಲ್ಲಿ ಅಮರ್ ಸಿಂಗ್ ದೇವೇಂದಾ 134.7 ಕಿ.ಮೀ ಓಡುವ ಮೂಲಕ (ಪ್ರಥಮ) ಹಾಗೂ ಜೀನೋ ಆಂಥೋನಿ 133.8 ಕಿ.ಮೀ ಓಡುವ ಮೂಲಕ (ದ್ವಿತೀಯ) ಹಾಗೂ ಸೌರವ್ ರಂಜನ್ 125.9 ಕಿ.ಮೀ ಓಡುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡರು.

12 ಗಂಟೆಯ ಓಟದಲ್ಲಿ ಮಹಿಳೆಯರ ವಿಭಾಗದಲ್ಲಿ ಅನಿತಾ ರೂಪೇಶ್ 86.1 ಕಿ.ಮೀ ಓಡುವ ಮೂಲಕ ಪ್ರಥಮ ಸ್ಥಾನ ಪಡೆದರೆ, ನಂದಿನಿ ಗಂಗಾಧರ 83.8 ಕಿ.ಮೀ ಓಟದ ಮೂಲಕ ದ್ವಿತೀಯ ಸ್ಥಾನ ಪಡೆದರು.

ಹಿರಿಯ ಮಹಿಳೆಯರ ಓಟದಲ್ಲಿ ಸಂಧ್ಯಾ ಆಲೆತಿ 61.7 ಕಿ.ಮೀ, ಹಿರಿಯ ಪುರಷ ವಿಭಾಗದಲ್ಲಿ ರಾಮ ಸಂಜೀವನ್ 79.4 ಕಿ.ಮೀ ಓಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡು ಗಮನಸೆಳೆದರು.

50 ಕಿ.ಮೀ ಪುರುಷರ ಮುಕ್ತ ವಿಭಾಗದಲ್ಲಿ ಸುಜಿತ್ ಟಿ.ಆರ್. (ಪ್ರಥಮ), ಸಂದೀಪ್ ಪೂಜಾರಿ ಶಿರ್ಸಿ (ದ್ವಿತೀಯ), ದೇವಿ ಶೆಟ್ಟಿ (ತೃತೀಯ). ಮಹಿಳೆಯರ ಮುಕ್ತ ವಿಭಾಗದಲ್ಲಿ ಜಸ್ಮಿತಾ ಕೊಡೆಂಕಿರಿ (ಪ್ರಥಮ), ಅಮೃತಾ (ದ್ವಿತೀಯ), ಬುಲ್ಬುಲಿ ಸ್ವಾಯಿನ್ (ತೃತೀಯ) ಸ್ಥಾನ ಪಡೆದುಕೊಂಡರು.

50 ಕಿ.ಮೀ 50 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಸಂಜೀವ ಬಲ್ಕೂರು, ಮಹಿಳೆಯರ ವಿಭಾಗದಲ್ಲಿ ರಿತಾ ಸತೀಶ್ ಪಟ್ಕಾರ್ ಪ್ರಥಮ ಸ್ಥಾನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-28-1179406603

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.