ಬೆಂಗಳೂರು: ಚಿಕ್ಕಮಗಳೂರಿನ ಅಂಧ ಅಥ್ಲೀಟ್ ರಕ್ಷಿತಾರಾಜು ಅವರು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಎಂಟನೇ ಆವೃತ್ತಿಯ ಇಂಡಿಯನ್ ಓಪನ್ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಮಹಿಳೆಯರ 1500 ಮೀಟರ್ (ಟಿ11) ಓಟದಲ್ಲಿ ಚಿನ್ನದ ಸಾಧನೆ ಮೆರೆದರು.

ಕೂಟದ ಮೊದಲ ದಿನ ಕರ್ನಾಟಕದ ಪ್ಯಾರಾ ಅಥ್ಲೀಟ್ಗಳು ನಾಲ್ಕು ಚಿನ್ನ ಸೇರಿದಂತೆ ಒಟ್ಟು ಎಂಟು ಪದಕಗಳನ್ನು ಗೆದ್ದುಕೊಂಡರು. ಮಹಿಳೆಯರ 100 ಮೀಟರ್ (ಟಿ37) ಓಟದಲ್ಲಿ ಭಾರತಿ ಭರತೇಶ್, ಶಾಟ್ಪಟ್ (ಎಫ್33) ಸ್ಪರ್ಧೆಯಲ್ಲಿ ಮೇಧಾ ಜಯಂತ್, ಪುರುಷರ 1500 ಮೀ. (ಟಿ13) ಓಟದಲ್ಲಿ ಶಂಕರಪ್ಪ ಶರತ್ ಅವರು ಸ್ವರ್ಣ ಗೆದ್ದರು.

ಮಹಿಳೆಯರ ಶಾಟ್ಪಟ್ನಲ್ಲಿ (ಎಫ್57) ಶೈಲಾ ಶಿಲ್ಪಾ, 100 ಮೀ ಓಟದಲ್ಲಿ (ಟಿ37) ಹರ್ಷಿತಾ ಟೇಟರ್, ಪುರುಷರ 100 ಮೀ. (ಟಿ38) ಓಟದಲ್ಲಿ ಸಚ್ಚಿದಾನಂದ ದೇವಾಡಿಗ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪುರುಷರ 100 ಮೀ (ಟಿ47) ಓಟದಲ್ಲಿ ಬಾಬು ಜಾನು ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಹುಟ್ಟಿನಿಂದಲೇ ದೃಷ್ಟಿಯನ್ನು ಕಳೆದುಕೊಂಡಿರುವ 25 ವರ್ಷ ವಯಸ್ಸಿನ ರಕ್ಷಿತಾರಾಜು 1500 ಮೀಟರ್ ದೂರವನ್ನು 5 ನಿಮಿಷ 17.54 ಸೆಕೆಂಡ್ಗಳಲ್ಲಿ ತಲುಪಿದರು.

ಮೂಡಿಗೆರೆ ತಾಲ್ಲೂಕಿನ ಬಾಳೂರಿನ ಗುಡ್ನಳ್ಳಿ ಗ್ರಾಮದ ರಕ್ಷಿತಾರಾಜು ಅವರು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಸತತ ಎರಡು (2018 ಮತ್ತು 2022) ಬಾರಿ ಚಿನ್ನ ಗೆದ್ದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಅವರು ಐದನೇ ಸ್ಥಾನ ಗಳಿಸಿದ್ದರು.

‘ಇದು ಮುಂದಿನ ಏಷ್ಯನ್ ಗೇಮ್ಸ್ಗೆ ಟ್ರಯಲ್ಸ್ ಕೂಡಾ ಆಗಿದ್ದರಿಂದ ಉತ್ತಮ ಸಮಯದಲ್ಲಿ ಗುರಿ ತಲುಪಿ, ಚಿನ್ನ ಗೆದ್ದಿರುವುದು ಖುಷಿ ತಂದಿದೆ. ಏಷ್ಯನ್ ಗೇಮ್ಸ್ನಲ್ಲಿ ಹ್ಯಾಟ್ರಿಕ್ ಚಿನ್ನ ಸಾಧನೆ ಮಾಡುವುದು ಮತ್ತು ಪ್ಯಾರಾ ಒಲಿಂಪಿಕ್ಸ್ನಲ್ಲಿ ಪದಕ ಜಯಿಸುವುದು ನನ್ನ ಮುಂದಿನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಾಯ್ ಕೇಂದ್ರದಲ್ಲಿ ಕಠಿಣ ತರಬೇತಿ ನಡೆಸುತ್ತಿದ್ದೇನೆ’ ಎಂದು ರಕ್ಷಿತಾರಾಜು ಅವರು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-51-376319123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.