ರಬಕವಿ ಬನಹಟ್ಟಿ: ಕ್ರೀಡೆ ಕೇವಲ ಮನರಂಜನೆ ಅಲ್ಲ, ಅದು ಯುವಕರಲ್ಲಿ ಆತ್ಮವಿಶ್ವಾಸ, ಶಿಸ್ತು, ಸಹನೆ ಹಾಗೂ ಸಾಮರಸ್ಯದ ಗುಣಗಳನ್ನು ಕಲಿಸಿಕೊಡುತ್ತದೆ ಎಂದು ರಬಕವಿ ಬನಹಟ್ಟಿ ನಗರದ ಯುವ ಮುಖಂಡ ವಿದ್ಯಾಧರ ಸವದಿ ತಿಳಿಸಿದರು.

ಅವರು ಬುಧವಾರ ಸ್ಥಳೀಯ ಎಸ್ಆರ್ಎ ಮೈದಾನದಲ್ಲಿ ಬಿಎಸ್ವೈ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಾಗಿದೆ. ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಎಸ್ಕೆಎಸ್ ಕ್ಲಬ್ ಈ ಭಾಗದಲ್ಲಿ ವಿವಿಧ ಕ್ರೀಡೆಗಳಲ್ಲಿಯ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ಸವದಿ ತಿಳಿಸಿದರು.

ನಗರದ ಹಿರಿಯರಾದ ಸುರೇಶ ಚಿಂಡಕ ಮಾತನಾಡಿ, ಇಂಥ ಕ್ರೀಡೆಗಳನ್ನು ಹಮ್ಮಿಕೊಳ್ಳುವುದರಿಂದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ನಗರದ ಮುಖಂಡರಾದ ಶ್ರೀಶೈಲ ಧಬಾಡಿ, ಶ್ರೀಶೈಲ ಬೀಳಗಿ, ಶ್ರೀಶೈಲ ಯಾದವಾಡ, ಮಹಾದೇವ ದೂಪದಾಳ, ಚಿದಾನಂದ ಹೊರಟ್ಟಿ, ಗೋವಿಂದ ಡಾಗಾ, ಭೀಮಶಿ ಹಂದಿಗುಂದ, ಪವಿತ್ರಾ ತುಕ್ಕನ್ನವರ, ಸವಿತಾ ಹೊಸೂರ, ಗೌರಿ ಮಿಳ್ಳಿ, ಸುವರ್ಣಾ ಕೊಪ್ಪದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-19-1908123466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.