ರಾಣೆಬೆನ್ನೂರು: ಕರ್ನಾಟಕದ ಚೆಸ್ ಕ್ರೀಡಾ ವಲಯದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದ್ದು, ನಗರದ ಖನ್ನೂರು ವಿದ್ಯಾನಿಕೇತನ ಸಿಬಿಎಸ್ಇ ಶಾಲೆಯ 10 ವರ್ಷದ ವಿದ್ಯಾರ್ಥಿ ಆಯಾನ್ ಪುಟಾಣಿ ಕರ್ನಾಟಕ ಚೆಸ್ ಚಾಂಪಿಯನ್ ಶಿಪ್ –2026ರಲ್ಲಿ ವಿಜಯ ಸಾಧಿಸಿ ಅತಿ ಕಿರಿಯ ವಯಸ್ಸಿನಲ್ಲಿ ರಾಜ್ಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಪೂರ್ಣ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಯಾನ್, 9 ಪಂದ್ಯಗಳಲ್ಲಿ 8 ಅಂಕ ಗಳಿಸಿ (7 ಜಯಗಳು, 2 ಡ್ರಾ) ಸೋಲಿಲ್ಲದೆ ಚಾಂಪಿಯನ್ ಪಟ್ಟ ಪಡೆದರು. ಅವರ ತೀಕ್ಷ್ಣ ತಂತ್ರಜ್ಞಾನ, ಸ್ಥಿರ ಮನೋಭಾವ ಮತ್ತು ಒತ್ತಡದ ಸಂದರ್ಭಗಳಲ್ಲಿ ಶಾಂತ ಆಟ ಮೆಚ್ಚುಗೆಗೆ ಪಾತ್ರವಾಯಿತು.

ಈ ಸ್ಪರ್ಧೆಯಲ್ಲಿ ಕೃಷ್ಣ (ದ್ವಿತೀಯ ಸ್ಥಾನ), ಸುದರ್ಶನ ಭಟ್ (ತೃತೀಯ ಸ್ಥಾನ) ಹಾಗೂ ಸಿದ್ಧಾಂತ್ ಪೂಂಜಾ (ಚತುರ್ಥ ಸ್ಥಾನ)ಸ್ಥಾನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-628575809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.