ಸೈದಾಪುರ: ‘ರಾಜ್ಯ, ರಾಷ್ಟ್ರದ ಪ್ರಗತಿಗೆ ಯುವ ಶಕ್ತಿಯ ಕೊಡುಗೆ ಅತ್ಯವಶ್ಯವಾಗಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ತಿಳಿಸಿದರು.

ಸಮೀಪದ ಕಿಲ್ಲನಕೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಕಿಲ್ಲನಕೇರಾ ಕ್ರಿಕೆಟ್ ಪ್ರಿಮಿಯರ್ ಲೀಗ್ ಸೀಸನ್–4’ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬುದ್ಧ ಪೌರ್ಣಿಮೆಯಂತಹ ಪವಿತ್ರ ದಿನದಂದು ಕೆಪಿಎಲ್ ಸೀಸನ್–4ರ ಉದ್ಘಾಟನೆ ಮಾಡಿದ್ದು ನಮ್ಮ ಪುಣ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದ ಬೆಳೆಯುತ್ತದೆ. ಕ್ರೀಡಾಪಟುಗಳು ಕ್ರೀಡಾ ನಿಯಮಗಳಿಗೆ ಬದ್ಧರಾಗಿರಬೇಕು’ ಎಂದು ಕಿವಿ ಮಾತು ಹೇಳಿದರು.

ಹಾರ ತುರಾಯಿಗೆ ಗುಡ್ ಬೈ: ಕೆಪಿಎಲ್ ಸೀಸನ್-4ರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಹಾರ ತುರಾಯಿ ಬದಲಿಗೆ ಜಗಜ್ಯೋತಿ ಬಸವಣ್ಣನವರ ಪುಸ್ತಕ ಹಾಗೂ ಗುಲಾಬಿ ಹೂವನ್ನು ನೀಡಿ ಗೌರವಿಸಲಾಯಿತು. ಇದಲ್ಲದೆ ಹಾರ ತುರಾಯಿಗೆ ಖರ್ಚು ಮಾಡಬೇಕಿದ್ದ ಹಣವನ್ನು ಗ್ರಾಮದ ಆಶಕ್ತ ವ್ಯಕ್ತಿ ಖಾಸಿಂ ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಾರ್ಥಕತೆ ಮೆರೆಯಲಾಯಿತು. ಕ್ರೀಡಾಕೂಟ ಸಂಘಟಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಚಂದ್ರಶೇಖರ ವಾರದ, ಕಾಂಗ್ರೆಸ್ ಮುಖಂ ವಿಶ್ವನಾಥ ನೀಲಹಳ್ಳಿ, ಅನಿಲಕುಮಾರ ಹೆಡಗಿಮದ್ರಾ, ಬಂದಪ್ಪಗೌಡ ಲಿಂಗೇರಿ, ವೀರಯ್ಯ ಸ್ವಾಮಿ ಹೀರೆನೂರ್, ಅಮೀನರೆಡ್ಡಿ ಗೌಡಗೇರಾ, ರಘುಪತಿ ಗೌಡಗೇರಾ, ವೆಂಕಟೇಶ ಕೂಡಲೂರು ವಿಜಯಮಲ್ಯ, ಕೋಲಿ ಸಮಾಜ ಸೈದಾಪುರ ವಲಯ ಅಧ್ಯಕ್ಷ ರಮೇಶ ಭೀಮನಳ್ಳಿ, ರಾಮಣ್ಣ, ಮರೆಪ್ಪ, ಅಂಬಣ್ಣ, ಮರೆಪ್ಪ, ಸಾಹೇಬಗೌಡ, ಜೈರಾಮ್, ಹಣಮಂತ ದೊಡ್ಮನಿ, ದೇವಪ್ಪಗೌಡ, ಜಗದೀಶ ಸಜ್ಜನ್, ಈರಣ್ಣಗೌಡ ಯರಗೋಳ, ವಿರೇಶ ಸಜ್ಜನ್, ವಿಜಯ ಕಂದಳ್ಳಿ, ಆಂಜನೇಯ ರಾಂಪೂರ, ಆಯೋಜಕರಾದ ಬೀರಲಿಂಗಪ್ಪ ಕಿಲ್ಲನಕೇರಾ, ಸೈದಪ್ಪ ಬಾಂಬೆ ಗೌಡಗೇರಾ, ಉಮೇಶ ಧೋತ್ರೆ ಸೇರಿದಂತೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-30-1656396476

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.