ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಓಂಕಾರ್ ಗೆಳೆಯರ ಬಳಗದ ವತಿಯಿಂದ ಡಾ. ರಾಜ್ ಕಪ್ ಕ್ರಿಕೆಟ್ ಟೂರ್ನಮೆಂಟ್ ಅನ್ನು ಹಮ್ಮಿಕೊಳ್ಳಲಾಯಿತು.

ಚಾಂಪಿಯನ್ ಆಗಿ ಹೊರಹೊಮ್ಮಿದ ನೇತಾಜಿ ಕ್ರಿಕೆಟರ್ಸ್ ಚಿಂತಾಮಣಿ ತಂಡಕ್ಕೆ ₹1 ಲಕ್ಷ ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕೆವೈಸಿಸಿ ಹೊಸಕೋಟೆ ತಂಡವು ದ್ವಿತೀಯ ಬಹುಮಾನದೊಂದಿಗೆ ಟ್ರೋಫಿ ಮತ್ತು ₹50 ನಗದನ್ನು ಪಡೆಯಿತು. ತೀರ್ಪುಗಾರರಾಗಿ ಹಿತೇಶ್, ಲಕ್ಷ್ಮಣ್ ಕಾರ್ಯ ನಿರ್ವಹಿಸಿದರು.

ಚಿತ್ರನಟ ಮಹಾಂತೇಶ್ ಮಾತನಾಡಿ, ‘ಯುವಕರು, ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ಬಿಟ್ಟು, ದೈಹಿಕ ಆರೋಗ್ಯ ವೃದ್ಧಿಸುವ ಕ್ರೀಡಾಕೂಟಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಈ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು’ ಎಂದು ಸಲಹೆ ನೀಡಿದರು.

ಯುವಕರು, ದುಶ್ವಟಗಳಿಗೆ ಬಲಿಯಾಗದೆ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಸೇರಿದಂತೆ ದೇಶೀಯ ಸೊಗಡು ಮೈಗೂಡಿಸಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿದರು.

ರವಿಪ್ರಸಾದ್, ಹತೀಕ್, ಎಂ.ಜೆ.ಶ್ರೀನಿವಾಸ್, ಸಿ.ರಿಜ್ವಾನ್, ದೇವನಹಳ್ಳಿ ಸಾಗರ್, ಶ್ರೀನಿವಾಸ್ ದಾಸ್, ಮಹೇಶ್, ಶಿವಕುಮಾರ್, ರಾಜೇಶ್, ಎಚ್.ಆರ್. ಪವನ್, ಗೌತಮ್, ದೇವರಾಜ್, ಪ್ರಸನ್ನ, ಅರುಣ್ ಕುಮಾರ್, ಧನುಷ್, ಶ್ರೀನಾಥ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-16-181348842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.