ಶಿಕಾರಿಪುರ: ‘ಕ್ರೀಡೆಗೆ ವಯಸ್ಸು, ಜಾತಿ ಭೇದ ಎಂಬುದಿಲ್ಲ. ಎಲ್ಲರೂ ಸಂಭ್ರಮಿಸುವ ಚಟುವಟಿಕೆ ಇದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕ್ರೀಡಾಕೂಟ ನಡೆಯಬೇಕಿದೆ’ ಎಂದು ಕಾಂಗ್ರೆಸ್ ಮುಖಂಡ ಎನ್.ವಿ.ಈರೇಶ್ ಹೇಳಿದರು.

ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಸೋಮವಾರ ವಿನಾಯಕ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಎರಡನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೇಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

‘ಕ್ರೀಡೆಯಲ್ಲಿ ಪ್ರತಿಭೆಗೆ ಪ್ರೋತ್ಸಾಹ ನೀಡಲು ಆದ್ಯತೆ ನೀಡಿದಾಗ ಉತ್ತಮ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ. ತಾಲ್ಲೂಕಿನಲ್ಲಿ ಕಬಡ್ಡಿ, ಕೊಕ್ಕೊ, ವಾಲಿಬಾಲ್ ಸೇರಿ ಹಲವು ಪಂದ್ಯಾವಳಿ ನಡೆಯುತ್ತಿದ್ದು, ಅವು ಇನ್ನಷ್ಟು ಹೆಚ್ಚಾಗಲಿ’ ಎಂದರು.

ಶಿವಮೊಗ್ಗ ತಂಡ ಪ್ರಥಮ ಬಹುಮಾನದೊಂದಿಗೆ ₹ 20,000 ತನ್ನದಾಗಿಸಿಕೊಂಡಿತು. ನಿಂಬೆಗೊಂದಿ ಗ್ರಾಮದ ತಂಡ ದ್ವಿತೀಯ ಬಹುಮಾನ (₹ 15,000), ಬೇಗೂರು ವಿನಾಯಕ ಕ್ರಿಕೆಟ್ ಕ್ಲಬ್ ತೃತೀಯ ಬಹುಮಾನ (₹ 10,000) ಪಡೆಯಿತು. ಗ್ರಾಮಸ್ಥರು, ಸಹಕಾರ ನೀಡಿದ ದಾನಿಗಳು, ಯುವಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-42-1510390577

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.