ಭದ್ರಾವತಿ: ಹಳದಮ್ಮ ದೇವಿ ಜಾತ್ರೆ ಅಂಗವಾಗಿ ಇಲ್ಲಿನ ಕನಕ ಮಂಟಪ ಮೈದಾನದಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ಕುಸ್ತಿ ಟೂರ್ನಿಯಲ್ಲಿ ರಾಣೆಬೆನ್ನೂರಿನ ಜಟ್ಟಿ ಕಾರ್ತಿಕ್ ಕಾಟೆ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯ ಪ್ರದೀಪ್ ಠಾಕೂರ್ ಅವರು ಬೆಳ್ಳಿ ಗದೆಗಳನ್ನು ಗೆದ್ದು ಬೀಗಿದರು.

ಬೆಳ್ಳಿ ಗದೆಗಾಗಿ ನಡೆದ ಮೊದಲ ಹಣಾಹಣಿಯಲ್ಲಿ ಕಾರ್ತಿಕ್ ಹಾಗೂ ಸಾಂಗ್ಲಿಯ ಸುದೇಶ್ ಠಾಕೂರ್ ಮುಖಾಮುಖಿಯಾದರು. ಆರಂಭದಲ್ಲಿ ಮುನ್ನಡೆ ಸಾಧಿಸಿದ ಸುದೇಶ್, ತಮ್ಮ ಬಿಗಿ ಪಟ್ಟುಗಳ ಮೂಲಕ ಕಾರ್ತಿಕ್ ಅವರನ್ನು ಮಣಿಸಲು ಯತ್ನಿಸಿದರು. ತಕ್ಷಣವೇ ಸಾವರಿಸಿಕೊಂಡು ಮಿಂಚಿನ ವೇಗದಲ್ಲಿ ಪ್ರತಿಪಟ್ಟು ಹಾಕಿದ ಕಾರ್ತಿಕ್, ಸುದೇಶ್ರನ್ನು ಚಿತ್ ಮಾಡಿ ಗೆಲುವಿನ ನಗೆ ಬೀರಿದರು.

ಬೆಳ್ಳಿ ಗದೆಗಾಗಿ ನಡೆದ ಮತ್ತೊಂದು ಪಂದ್ಯದಲ್ಲಿ ಸಾಂಗ್ಲಿಯ ಪ್ರದೀಪ್ ಠಾಕೂರ್ ಅವರು ಇಂಗಳಗಿಯ ಪ್ರಕಾಶ್ ಪಾಟೀಲ್ ವಿರುದ್ಧ ಗೆಲುವು ಸಾಧಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ, ಇಬ್ಬರು ಜಟ್ಟಿಗಳು ಸಮಬಲದ ಹೋರಾಟ ನಡೆಸಿದರು. ಪಂದ್ಯದ ನಡುವೆ ಪ್ರಕಾಶ್ ಅವರಿಗೆ ಸೊಂಟ ಹಾಗೂ ಬೆನ್ನು ನೋವು ಕಾಣಿಸಿಕೊಂಡು ಸ್ವಲ್ಪ ಬಳಲಿದರು. ಕಾಳಗ ಮುಂದುವರಿದಾಗ , ಪ್ರದೀಪ್ ಮೇಲುಗೈ ಸಾಧಿಸಿ ಎದುರಾಳಿ ಯನ್ನು ಚಿತ್ ಮಾಡಿದರು.

ಮತ್ತೊಂದು ರೋಚಕ ಹಣಾಹಣಿಯಲ್ಲಿ, ಭದ್ರಾವತಿಯ ಚನ್ನಕಿಶೋರ್ ಅವರು ಕಪ್ಪನಹಳ್ಳಿ ಗ್ರಾಮದ ಸತೀಶ್ ಅವರನ್ನು ಸೋಲಿಸಿದರು. ಕೆರೆಬೀರನಹಳ್ಳಿ ಗ್ರಾಮದ ಶಿವಾಜಿ ಹಾಗೂ ಶಿಕಾರಿಪುರದ ಚಂದ್ರು ನಡುವಿನ ಪಂದ್ಯದಲ್ಲಿ ಇಬ್ಬರೂ ಪೈಲ್ವಾನರು ಪಟ್ಟು ಹಾಗೂ ಪ್ರತಿಪಟ್ಟುಗಳನ್ನು ಹಾಕಿ, ಸಮಬಲದ ಹೋರಾಟ ನಡೆಸಿದರು. ಅಂತಿಮವಾಗಿ ಶಿವಾಜಿ ಗೆಲುವಿನ ನಗೆ ಬೀರಿದರು.

ಹೆಗಲ ಮೇಲೆ ಹೊತ್ತ ಅಭಿಮಾನಿ ಗಳು: ಬೆಳ್ಳಿಗದೆ ಹೋರಾಟ ನಡೆಯು ವಾಗ ಪ್ರೇಕ್ಷಕರು ‘ಹಾಕು ಪೇಚು, ಹಾಕು ಡಾವ್’ ಎಂದು ಕೂಗುತ್ತ, ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟುತ್ತ ಜಟ್ಟಿಗಳನ್ನು ಹುರಿದುಂಬಿಸಿದರು. ಗೆದ್ದ ಜಟ್ಟಿಗಳನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತುಕೊಂಡು ತಮಟೆ ವಾದ್ಯದೊಂದಿಗೆ ಅಖಾಡದ ಸುತ್ತ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-42-1941325017

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.