ಗೋಕಾಕ: ಮಹಾರಾಷ್ಟ್ರದ ರಾಯಲ್ ಸಿ.ಸಿ. ಸೋಲಾಪೂರ ಕ್ರಿಕೆಟ್ ತಂಡವು ಶುಕ್ರವಾರ ರಾಹುಲ್ ಟ್ರೋಫಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಿಜನ್ -2 ಪೈನಲ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿತು.

ಪಾಂಡುರಂಗ ಸಿ.ಸಿ. ರಾಯಗಡ್ ಉಸಮಾನ ಪಟೇಲ ನೇತೃತ್ವದ ತಂಡದ ಎದುರು 2 ರನ್ಗಳ ರೋಚನ ಗೆಲುವು ಸಾಧಿಸಿತು.

ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ 2026ನೇ ಸಾಲಿನ ರಾಹುಲ್ ಟ್ರೋಫಿ ಸಿಜನ್ -2 ಫೈನಲ್ ಪಂದ್ಯದಲ್ಲಿ ರಾಯಗಡ್ ತಂಡವನ್ನು ಪರಾಭವಗೊಳಿಸುವ ಮೂಲಕ ಮೂಲಕ ಚೊಚ್ಚಲ ಬಾರಿಗೆ ರಾಹುಲ್ ಟ್ರೋಫಿ ಮುಡಿಗೇರಿಸಿಕೊಂಡು ಸಂಭ್ರಮಿಸಿತು.

ಗೆಲ್ಲಲು 73 ರನ್ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ರಾಯಗಡ್ ತಂಡಕ್ಕೆ ಸೋಲಾಪೂರ ತಂಡದ ಬಾಲರ್ಗಳಾದ ಸಮೀರ ಬಿರಾದಾರ, ಪ್ರಥಮೇಶ, ಅಶೀಶ ದಾಸ ಉತ್ತಮ ಬಾಲಿಂಗ ಪ್ರದರ್ಶನ ಮಾಡಿ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು.

ಪಂದ್ಯದ ಕೊನೆಯ ಓವರ್ನ ಕೊನೆಯ ಚಂಡಿನಲ್ಲಿ 3 ರನ್ ಬೇಕಿದ್ದಾಗ ಬ್ಯಾಟ್ಸಮನ್ ಕೇವಲ ಒಂದು ರನ್ ಪಡೆಯಲು ಮಾತ್ರ ಯಶಸ್ವಿಯಾದರು. ವೀಕ್ಷಕರಲ್ಲಿ ಅತ್ಯಂತ ರೋಮಾಂಚನ ಮೂಡಿಸಿದ ಈ ಪಂದ್ಯದಲ್ಲಿ ಸೋಲಾಪೂರ ತಂಡ 2 ರನ್ನಿಂದ ಪಂದ್ಯವನ್ನು ಗೆದ್ದುಕೊಂಡು ಟ್ರೋಫಿ ತನ್ನದಾಗಿಸಿಕೊಂಡಿತು.

ವಿಜೇತ ತಂಡಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರು ಪ್ರಶಸ್ತಿ ವಿತರಿಸಿದರು.

ಫೈನಲ್ ಪಂದ್ಯ ಗೆದ್ದ ರಾಯಲ್ ಸಿ.ಸಿ ಸೋಲಾಪೂರ ತಂಡಕ್ಕೆ ಪ್ರಥಮ ಬಹುಮಾನ ₹3 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ ಮತ್ತು ಎರಡನೇ ಬಹುಮಾನ ಪಡೆದ ಪಾಂಡುರಂಗ ಸಿ.ಸಿ ರಾಯಗಡ್ ತಂಡಕ್ಕೆ ದ್ವಿತೀಯ ಬಹುಮಾನ ₹2 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು.

ಉತ್ತಮ ಬ್ಯಾಟ್ಸಮನ್, ಉತ್ತಮ ಬಾಲರ್, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನ ನೀಡಲಾಯಿತು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಬ ಕುಲಗೋಡೆ, ಸಂಘಟಕ ರಿಯಾಜ ಚೌಗಲಾ, ಬಿ.ಬಿ.ಘೋಡಗೇರಿ, ಗಿರೀಶ್ ಸೋನವಾಲಕರ, ಹನೀಫ್ ಶಾಬಾಷಖಾನ, ಸಂತೋಷ ಭಟ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-21-272127312

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.