ಸುರಪುರ: ‘ವಯಸ್ಸಿನ ಅಂತರವಿಲ್ಲದೆ ಆಟವಾಡುವ ಕ್ರೀಡೆಯೆಂದರೆ ಕ್ರಿಕೆಟ್. ಜಾತಿ, ಧರ್ಮ, ಭಾಷೆ, ಪ್ರದೇಶ, ಬಡವ-ಶ್ರೀಮಂತ ಎಂಬ ಭೇದ ಮರೆತು ಎಲ್ಲರೂ ಸಹೋದರತೆಯಿಂದ ಆಡಬೇಕು’ ಎಂದು ಬಿ.ಬಿ. ಶಿವಣ್ಣ ಕಟ್ಟಿಮನಿ ಹೇಳಿದರು.

ನಗರದ ಬೆಟ್ಟದ ರತ್ನಮ್ಮ ದೇವಿಯ ಆವರಣದಲ್ಲಿ ನಡೆಯುತ್ತಿರುವ ಭೋವಿಗಲ್ಲಿ ಪ್ರೀಮಿಯರ್ ಲೀಗ್ ಸೀಸನ್–5ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ರೀಡೆ ಸಹೋದರತೆಯ ಗುಣವನ್ನು ಬೆಳೆಸುತ್ತದೆ. ಒಂದು ತಂಡದ ಎಲ್ಲ ಆಟಗಾರರು ಒಂದೇ ಸಮವಸ್ತ್ರ ಧರಿಸಿ ಆಡುವುದರಿಂದ ಮೇಲು–ಕೀಳಿಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಗೆಲ್ಲಲು 11 ಆಟಗಾರರು ಒಟ್ಟಾಗಿ ಒಂದೇ ಮನಸ್ಸಿನಿಂದ ಶ್ರಮಿಸುತ್ತಾರೆ. ನಿಸ್ವಾರ್ಥದಿಂದ ಆಡಿದರೆ ಗೆಲುವು ಸಾಧ್ಯ’ ಎಂದರು.

ನಗರಸಭೆ ಮಾಜಿ ಉಪಾಧ್ಯಕ್ಷ ಮಹೇಶ ಪಾಟೀಲ, ಮಾಜಿ ಸದಸ್ಯ ಮಾನಪ್ಪ ಚಳ್ಳಿಗಿಡ, ಪತ್ರಕರ್ತ ನಾಗರಾಜ ನ್ಯಾಮತಿ ಮಾತನಾಡಿದರು.

ಪರಶುರಾಮ ಚಳ್ಳಿಗಿಡ, ಭೀಮಣ್ಣ ನಾಯ್ಕೊಡಿ, ಮರೆಯಪ್ಪ ಕವಡಿಮಟ್ಟಿ, ಉಮಾಕಾಂತ ವಾರಿ, ಪವನಕುಮಾರ ನಾಯಕ, ಮಹೇಂದ್ರ ನಾಯಕ, ಸಂತೋಷ ನಾಯಕ, ಮಾರುತಿ, ಲಕ್ಷ್ಮಣ, ಉಮೇಶ, ಜಟ್ಟೆಪ್ಪ ಮತ್ತು ಕ್ರೀಡಾಪಟುಗಳು ಇದ್ದರು.

ಅಂಬರೀಶ್ ನಾಯ್ಕೊಡಿ ನಿರೂಪಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-30-281615445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.