ತೀರ್ಥಹಳ್ಳಿ: ಮೇಲಿನಕುರುವಳ್ಳಿಯ 53ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಪಾರಂಪರಿಕ ಕ್ರೀಡಾ ಸಮಿತಿ, ಮಾಲ್ಗುಡಿ ಗೆಳೆಯರ ಬಳಗ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಟಗರು ಕಾಳಗ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು.

ಮಧ್ಯಾಹ್ನ ಆರಂಭಗೊಂಡ ಕಾಳಗ ಮಧ್ಯರಾತ್ರಿಯವರೆಗೆ ನಡೆಯಿತು. ಸಾವಿರಾರು ಜನ ಕಾಳಗ ವೀಕ್ಷಿಸಿದರು. ನೆಲಮಂಗಲ, ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅಂದಾಜು 80ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು.

ಎರಡು ಹಲ್ಲು ವಿಭಾಗದಲ್ಲಿ ಶಿವಮೊಗ್ಗದ ಅಧೀರ ಪ್ರಥಮ (₹ 8,000), ಭದ್ರಾವತಿಯ ಏಳಿಗೆರೆ ಕಾಳಿ ದ್ವಿತೀಯ (₹ 4,000), ನಾಲ್ಕು ಹಲ್ಲು ವಿಭಾಗದಲ್ಲಿ ಭದ್ರಾವತಿಯ ಸುಲ್ತಾನ್ ಮಿರ್ಜಾ ಪ್ರಥಮ (₹ 10,000), ಶಿವಮೊಗ್ಗದ ವಾಲ್ಮೀಕಿ ದ್ವಿತೀಯ (₹ 5,000), ಆರು ಹಲ್ಲು ವಿಭಾಗದಲ್ಲಿ ಶಿವಮೊಗ್ಗದ ಸೂರ್ಯಪುತ್ರ ಪ್ರಥಮ (₹ 15,000), ಛತ್ರಪತಿ ರಣಧೀರ ದ್ವಿತೀಯ (₹ 7,000), ಎಂಟು ಹಲ್ಲು ವಿಭಾಗದಲ್ಲಿ ಮಂಚ ಬಾಯ್ಸ್ ಅರಿಗೆ ಪ್ರಥಮ (₹ 25,000), ಶಿವಮೊಗ್ಗದ ಜುಲ್ಫಿಕರ್ ದ್ವಿತೀಯ (₹ 15,000) ಬಹುಮಾನ ಪಡೆದುಕೊಂಡಿತು.

ಕ್ರೀಡಾ ಸಮಿತಿಯ ಅಧ್ಯಕ್ಷ ಎಸ್.ದೇವರಾಜ್, ಸದಸ್ಯರಾದ ಗಿರೀಶ್, ಸುಬ್ರಮಣ್ಯ, ಸಿದ್ಧಾರ್ಥ್, ಭರತ್ ಆರ್, ಹರೀಶ್ ಡಿ, ಸಂತೋಷ್ ಪಿ. ಇದ್ದರು.

ಹೊಸಮನೆ ಶಬರೀಶ್, ಮಣಿಕಂಠ, ಮಂಜುನಾಥ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-42-1016526191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.