ತುಮಕೂರು: 24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದ ಆತಿಥ್ಯಕ್ಕೆ ಕಲ್ಪತರು ನಾಡು ತುಮಕೂರು ಸಜ್ಜಾಗಿದೆ. ಇಲ್ಲಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಇದೇ 24ರಿಂದ 26ರವರೆಗೆ ನಡೆಯುವ ಕೂಟದಲ್ಲಿ ದೇಶದ ಅಗ್ರ ಅಥ್ಲೀಟ್ಗಳು ಕಣಕ್ಕಿಳಿಯಲಿದ್ದಾರೆ.

ಜಿಲ್ಲಾಡಳಿತ, ತುಮಕೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ, ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಮತ್ತು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ಆಶ್ರಯದಲ್ಲಿ ನಡೆಯುವ ಈ ಕೂಟದಲ್ಲಿ ಕರ್ನಾಟಕ ಸೇರಿದಂತೆ 28 ರಾಜ್ಯಗಳ 1380 ಅಥ್ಲೀಟ್ಗಳು (20 ವರ್ಷದೊಳಗಿನವರು) ಪಾಲ್ಗೊಳ್ಳಲಿದ್ದಾರೆ. ಜೆಎಸ್ಡಬ್ಲ್ಯೂ ಮತ್ತು ರಿಲಯನ್ಸ್ ಫೌಂಡೇಷನ್ ತಂಡಗಳು ಸ್ಪರ್ಧೆಯಲ್ಲಿವೆ.ಕರ್ನಾಟಕದ 110 ಅಥ್ಲೀಟ್ಗಳು ಕಣದಲ್ಲಿದ್ದಾರೆ.

ಪುರುಷರ ಮತ್ತು ಮಹಿಳೆಯರ ವಿಬಾಗದಲ್ಲಿ 100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ, 5000 ಮೀಟರ್ ಓಟ, ಹರ್ಡಲ್ಸ್, ಸ್ಟೀಪಲ್ಚೇಸ್, ಹೈಜಂಪ್, ಪೋಲ್ವಾಲ್ಟ್, ಲಾಂಗ್ಜಂಪ್, ಟ್ರಿಪಲ್ ಜಂಪ್, ಹ್ಯಾಮರ್ ಥ್ರೋ, ಜಾವೆಲಿನ್ ಥ್ರೋ, ರೇಸ್ವಾಕ್, ರಿಲೇ, ಡೆಕಾಥ್ಲಾನ್ (ಪುರುಷರಿಗೆ), ಹೆಪ್ಟಾಥ್ಲಾನ್ (ಮಹಿಳೆಯರಿಗೆ) ಸೇರಿದಂತೆ ಒಟ್ಟು 40 ಸ್ಪರ್ಧೆಗಳು ನಡೆಯಲಿವೆ.

ಈ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಥ್ಲೀಟ್ಗಳಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗಲಿದೆ. ಹಾಂಗ್ಕಾಂಗ್ನಲ್ಲಿ ಮೇ 28ರಿಂದ 31 ರವರೆಗೆ ನಡೆಯುವ ಏಷ್ಯನ್ 20 ವರ್ಷದೊಳಗಿನವರ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಮತ್ತು ಆ.5ರಿಂದ 9ರವರೆಗೆ ಅಮೆರಿಕದಲ್ಲಿ ನಡೆಯುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಇದನ್ನು ಭಾರತ ತಂಡದ ಆಯ್ಕೆ ಟ್ರಯಲ್ಸ್ ಆಗಿ ಪರಿಗಣಿಸಲಾಗಿದೆ.

ಅಂತರರಾಷ್ಟ್ರೀಯ ಕೂಟಕ್ಕೂ ಆಯ್ಕೆ ಟ್ರಯಲ್ಸ್ ಇದಾಗಿರುವುದರಿಂದ ಭಾರತ ಅಥ್ಲೆಟಿಕ್ ಫೆಡರೇಷನ್ ಅಧಿಕಾರಿಗಳು ಹಾಗೂ ತಾಂತ್ರಿಕ ವರ್ಗದವರು ಕ್ರೀಡಾಕೂಟದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ‘ಫೋಟೋ ಫಿನಿಷ್’ ಸೇರಿದಂತೆ ಅತ್ಯಾಧುನಿಕ ತಾಂತ್ರಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಅಥ್ಲೀಟ್ಗಳ ಉದ್ದೀಪನ ಮದ್ದು ಪರೀಕ್ಷೆ ಕೂಡ ನಡೆಯಲಿದೆ.

‘ಪ್ರಥಮ ಬಾರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕೂಟ ಆಯೋಜಿಸಲಾಗಿದೆ. ಮಧ್ಯಾಹ್ನ ಬಿಸಿಲಿನ ತಾಪಮಾನ ಹೆಚ್ಚು ಇರುವುದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಬೆಳಿಗ್ಗೆ 6ರಿಂದ 10.30ರವರೆಗೆ, ಮಧ್ಯಾಹ್ನ 3.30ರಿಂದ ರಾತ್ರಿ 8ರವರೆಗೆ ಸ್ಪರ್ಧೆಗಳನ್ನು ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-576572886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.