ತುಮಕೂರು: ಇಲ್ಲಿನ ಜಿಲ್ಲಾ ಕ್ರೀಡಾಂಗಣ ದಲ್ಲಿ ಭಾನುವಾರ ಮುಕ್ತಾಯವಾದ 24ನೇ ರಾಷ್ಟ್ರೀಯ ಜೂನಿಯರ್ (20 ವರ್ಷ ದೊಳಗಿನವರ) ಅಥ್ಲೆಟಿಕ್ಸ್ ಕ್ರೀಡಾಕೂಟದ ಮಹಿಳೆಯರ 800 ಮೀಟರ್ ಓಟದಲ್ಲಿ ಯಾದಗಿರಿ ಜಿಲ್ಲೆ ಶಹಾಪುರದ ನಾಗಿಣಿ ಚಿನ್ನದ ಪದಕ ಜಯಿಸಿದರು. 2.12 ಸೆಕೆಂಡ್ಗಳಲ್ಲಿ ಗುರಿ ತಲುಪಿದ ನಾಗಿಣಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಮಹಿಳೆಯರ 400 ಮೀ. ಹರ್ಡಲ್ಸ್ ನಲ್ಲಿ ರಾಜ್ಯದ ಅಪೂರ್ವ ಆನಂದ್ ನಾಯ್ಕ್ 1.01 ಸೆಕೆಂಡ್ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು. ಉತ್ತರ ಪ್ರದೇಶದ ತನು ಚೌಧರಿ (59.38 ಸೆ) ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಜಾವಲಿನ್ ಥ್ರೋನಲ್ಲಿ ಜೆಎಸ್ಡಬ್ಲ್ಯೂನ ಪೂನಮ್ (51.64 ಮೀ) ಚಿನ್ನದ ಪದಕ ಮತ್ತು ಕರ್ನಾಟಕದ ಸಿ.ಜೆ.ಭವ್ಯಾ 47.23 ಮೀ. ಎಸೆತದೊಂದಿಗೆ ಕಂಚು ಗೆದ್ದರು.

ಪುರುಷರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಕರ್ನಾಟಕದ ಓಟಗಾರ ಸಿ.ನಿಖಿಲ್ ಕಂಚಿನ ಪದಕ ಪಡೆದರು. 9.35 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಹರಿಯಾಣದ ಸುಮಿತ್ ರಾಠಿ (9.28 ಸೆ) ಬಂಗಾರದ ಪದಕಕ್ಕೆ ಕೊರಳೊಡ್ಡಿದರು.

ಅಭಯ್ಗೆ ಎರಡು ಚಿನ್ನ: ಪುರಷರ 100 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ರಿಲಯನ್ಸ್ ಸಂಸ್ಥೆಯ ಅಭಯ್ ಸಿಂಗ್ ಮತ್ತೊಮ್ಮೆ ಗಮನ ಸೆಳೆದರು. 200 ಮೀ. ಓಟದಲ್ಲಿ 20.82 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಸಾಧಿಸಿದರು. ಜತೆಗೆ ಕೂಟದ ದಾಖಲೆ ಬರೆದರು.

ಡೋಪಿಂಗ್ ಶಂಕೆ: ಉತ್ತರ ಪ್ರದೇಶದಮೂವರು ಅಥ್ಲೀಟ್ಗಳು ವಾಸವಿದ್ದ ಹೋಟೆಲ್ ಕೊಠಡಿಯಲ್ಲಿ ಸಿರಿಂಜ್ಗಳು ತುಂಬಿದ್ದ ಬ್ಯಾಗ್ ಶನಿವಾರ ಪತ್ತೆ ಯಾಗಿದೆ. ಮೂವರಲ್ಲಿ ಇಬ್ಬರು ಅಪ್ರಾಪ್ಪ ವಯಸ್ಸಿನವರು ಎನ್ನಲಾಗಿದ್ದು, ಉದ್ದೀಪನ ಮದ್ದು ಸೇವನೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-2132659050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.