ವಿಜಯಪುರ: ಅಗ್ರ ಶ್ರೇಯಾಂಕದ ಮೆಹುಲ್ ಮಾನವ್ ಅರುಳ್ ಮುರುಗನ್, ಮೂರನೇ ಶ್ರೇಯಾಂಕದ ಪಿಯೂಷ್ ತ್ರಿಪಾಠಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಯಾನೆಕ್ಸ್- ಸನ್ರೈಸ್’ ಕರ್ನಾಟಕ ರಾಜ್ಯ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 17 ವರ್ಷದೊಳಗಿನವರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪಿದರು.

ಮೊದಲ ಬಾರಿ ನಗರದಲ್ಲಿ ನಡೆಯು ತ್ತಿರುವ ಈ ಟೂರ್ನಿಯ ಪಂದ್ಯಗಳು ಉತ್ತಮ ಪೈಪೋಟಿಯಿಂದ ಕೂಡಿದ್ದವು. ಶುಕ್ರವಾರ ಬಹುತೇಕ ಪಂದ್ಯಗಳು ಮೂರು ಗೇಮ್ಗಳನ್ನು ಕಂಡವು.

ಅರುಳ್ಮುರುಗನ್ 21–19, 16–21, 21–12 ರಿಂದ ಸಾತ್ವಿಕ್ ಎಸ್.ಪ್ರಭು ಅವರನ್ನು ಸೋಲಿಸಿದರು. ಇತರ ಪಂದ್ಯಗಳಲ್ಲಿ ಪಿಯೂಷ್ 21-15, 14-21, 21-16 ರಿಂದ ಇವಾನ್ ಫರ್ನಾಂಡಿಸ್ ಅವರನ್ನು, ಐದನೇ ಶ್ರೇಯಾಂಕದ ಶಿವರಾಜ್ ಕಬ್ಬೆರಳ್ಳಿ 21-18, 21-23, 21-13 ರಿಂದ ದೇವಾಂಶ್ ಚೌಧರಿ ಅವರನ್ನು ಹಾಗೂ ಡೈಲನ್ ಪಿ. ಥೋಕ್ಚೋಮ್ 21-11, 18-21, 21-14 ರಿಂದ ಶ್ಯಾಮ್ ಬಿಂದಿಗನವಿಲೆ ಅವರನ್ನು ಸೋಲಿಸಿದರು.

15 ವರ್ಷದೊಳಗಿನವರ ವಿಭಾಗ ದಲ್ಲಿ 13ನೇ ಶ್ರೇಯಾಂಕದ ಯಶೋ ವರ್ಧನ್ ಎಸ್.ಆರ್. (ಬೆಂಗಳೂರು ಗ್ರಾಮಾಂತರ) ಕ್ವಾರ್ಟರ್ ಫೈನಲ್ ಪಂದ್ಯ ದಲ್ಲಿ 21-18, 21-10 ರಲ್ಲಿ ನೇರ ಗೇಮ್ ಗಳಿಂದ ರಾಯಚೂರಿನ ರೋಹನ್ ಕರುತುರಿ ಅವರನ್ನು ಸೋಲಿಸಿದರು.

ಎಂಟರ ಘಟ್ಟದ ಇತರ ಪಂದ್ಯಗಳಲ್ಲಿ ಇಶಾನ್ ಪಾಠಕ್ 21-15, 21-15 ರಿಂದ ಮಾಧವ ಸತೀಶ್ ವೀಣ ವಿರುದ್ಧ, ಬಿ.ಬಿ.ವಿಶಾಲ್ ಉತ್ತಪ್ಪ 21-18, 16-21, 21-19 ರಿಂದ ಆಯುಷ್ ಮಿಶ್ರಾ ವಿರುದ್ಧ, ಗೌತಮ್ ಎಸ್. ನಾಯರ್ 21-10, 21-7 ರಿಂದ 16ನೇ ಶ್ರೇಯಾಂಕದ ಅರ್ಜುನ್ ಅಗ್ರವಾಲ್ ವಿರುದ್ಧ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿದರು.

ಮಿಂಚಿದ ಮಹಿತಾ: 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಮಹಿತಾ ನಾಯ್ಡು ಸುರಿಸೆಟ್ಟಿ (ಬೆಂಗಳೂರು ನಗರ) 21-8, 21-15 ರಿಂದ ಲಿಶಾ ವಿ. ವಿರುದ್ಧ ಜಯಗಳಿಸಿ ಸೆಮಿಫೈನಲ್ಗೆ ಮುನ್ನಡೆದರು.

ಇತರ ಪಂದ್ಯಗಳಲ್ಲಿ ಮೂರನೇ ಶ್ರೇಯಾಂಕದ ಆದಿತಿ ಸುಶಾಂತ್ 21-18, 21-1 8 ರಿಂದ ಸಿರಿ ಟಿ. ಆರ್. ವಿರುದ್ಧ, ಆರನೇ ಶ್ರೇಯಾಂಕದ ಹನ್ಸಿಕಾ ರಾಕೇಶ್ 21-17, 12-21, 21-13 ರಿಂದ ಹಂಸಾ ಮುರಳಿಧರ ವಿರುದ್ಧ, ಸ್ಮೃತಿ ಎಸ್. 21-16, 17-21, 21-15 ರಿಂದ ಎಂಟನೇ ಶ್ರೇಯಾಂಕದ ಜೋಹನ್ನಾ ಅಹಿಲನ್ ವಿರುದ್ಧ ಗೆಲುವು ಸಾಧಿಸಿದರು.

17 ವರ್ಷದೊಳಗಿನ ಬಾಲಕಿಯರ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಕೀರ್ತಿ ಬಾಲಾಜಿ 21-9, 21-17 ರಿಂದ ಯಶಿಕಾ ಶಿವಪ್ರಕಾಶ್ ವಿರುದ್ಧ, ಮಹಿತಾ ನಾಯ್ಡು ಸುರಿಸೆಟ್ಟಿ 21-10, 21-9 ರಿಂದ ಹಂಸಾ ಮುರಳಿಧರ ವಿರುದ್ಧ, ಸಿರಿ ಟಿ.ಆರ್. 21-14, 11-21, 22-20 ರಿಂದ 17ನೇ ಶ್ರೇಯಾಂಕದ ಡೆಬೋರಾ ಜಾನ್ ವಿರುದ್ಧ; ಹಾಗೂ ಆದಿತಿ ಸುಶಾಂತ್ 21-17, 21-18 ರಿಂದ ಐದನೇ ಶ್ರೇಯಾಂಕದ ಶ್ರೀನಾಗಲಕ್ಷ್ಮಿ ಪಿ. ವಿರುದ್ಧ ಜಯಗಳಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1624245663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.