ವಿಜಯಪುರ: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಿಎಲ್ಡಿಇ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಯೋನೆಕ್ಸ್- ಸನ್ರೈಸ್’ ಕರ್ನಾಟಕ ರಾಜ್ಯ ಮಟ್ಟದ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಅರ್ಹತಾ ಸುತ್ತಿನ 16ನೇ ರೌಂಡ್ ಆಫ್ನಲ್ಲಿ ಗುರುವಾರ 15 ವರ್ಷದೊಳಗಿನ ಮಿಶ್ರ ಡಬಲ್ಸ್ನಲ್ಲಿ ರಾಯಚೂರಿನ ಯುವನ್ ಕೃಷ್ಣ ರವೆಲ್ಲಾ ಮತ್ತು ನಿಹಾರಿಕಾ ಎ. ಪಿ. 21-14, 21-15 ಅಂತರದಲ್ಲಿ ಬೆಂಗಳೂರು ನಗರದ ನಿನಾದ್ ಜಿ.ಕೆ. ಮತ್ತು ಋಷಿತಾ ಗೋಪಿನಾಥ್ ವಿರುದ್ಧ ಜಯಗಳಿಸಿದರು.

ಬೆಂಗಳೂರು ನಗರ ನಕುಲನ್ ಹರಿ ಎನ್.ಡಿ. ಮತ್ತು ಜೋಹನ್ನಾ ಅಹಿಲನ್ 21-13, 21-18 ಅಂತರದಲ್ಲಿ ಉತ್ಕರ್ಷ್ ಬಿ. ಅಜಯ್ ಮತ್ತು ಜೀವಿಕಾ ಸಾಯಿ ರಾಜೇಶ್ಕುಮಾರ್ ಅವರನ್ನು ಪರಾಭವಗೊಳಿಸಿದರು.

ಹಿತನ್ ರಾಜ್ ಮತ್ತು ಅವನಿ ನರಸಿಂಹ ಪ್ರಸಾದ್ 21-9, 21-14 ಅಂತರದಲ್ಲಿ ಅನುಜ್ ಆಚಯ್ಯ ಮತ್ತು ಸಾನ್ವಿ ಎಂ. ಗೌಡ ವಿರುದ್ಧ, ಯಶವರ್ಧನ್ ಎಸ್.ಆರ್. ಮತ್ತು ಆದಿತಿ ಸುಶಾಂತ್ 21-13, 21-6 ಅಂತರದಲ್ಲಿ ಕಿಯಾನ್ ಅಬ್ದುಲ್ಲಾ ನಿಸ್ಸಾರ್ ಮತ್ತು ಆರಾಧ್ಯ ಜೆ. ಆಂಚನ್ ವಿರುದ್ಧ, ಆದರ್ಶ್ ಪದ್ವೇತ್ನಾಯ ಮತ್ತು ಆದಿತಿ ಬಿ. ಕುಲಕರ್ಣಿ 21-10, 21-10 ಅಂತರದಲ್ಲಿ ಗೌರವ್ ವಿ.ಜೆ. ಮತ್ತು ಖುಷಿ ಆರ್. ವಿರುದ್ಧ ಜಯಗಳಿಸಿದರು.

ಜೀವನ್ ಮುರಳೀಧರ ಮತ್ತು ಅರ್ಶಿಯಾ ಬಾಬು 21-11, 21-19 ಅಂತರದಲ್ಲಿ ಆರ್ಯನ್ ನುಟಕ್ಕಿ ಮತ್ತು ಉಪ್ಪುಲೂರಿ ಶ್ರೀಹಿತಾ ವಿರುದ್ಧ, ಧ್ಯಾನ್ ಎಸ್. ಮತ್ತು ಆರ್ಯಾ ಕೂರ್ಸೆ ಜೋಡಿಯು ಧನ್ವಂತ್ ವಿ. ಶೆಟ್ಟಿ ಮತ್ತು ಜ್ಞಾನಶ್ರೀ ವಸಂತ ಕುಮಾರ ವಿರುದ್ಧ ವಾಕ್ಓವರ್ ಮೂಲಕ ಜಯಗಳಿಸಿದರು.

ಮೈಸೂರಿನ ಬಿ.ಬಿ. ವಿಶಾಲ್ ಉತ್ತಪ್ಪ ಮತ್ತು ಹಂಸಿಕಾ ರಾಕೇಶ್ ಜೋಡಿಯು ಬೆಂಗಳೂರು ನಗರದ ದಕ್ಷ್ ಬಿಂದಹಳ್ಳಿ ಅರವಿಂದ್ ಮತ್ತು ಆಧ್ಯ ಶೆಟ್ಟಿ ವಿರುದ್ಧ 21-10, 21-11 ಅಂತರದಲ್ಲಿ ಜಯಗಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-26-537306475

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.