ವಿಜಯಪುರ(ದೇವನಹಳ್ಳಿ): ಪಟ್ಟಣದ ನಾಡಪ್ರಭು ಕೆಂಪೇಗೌಡ ಯುವಕರ ಬಳಗ ಆಯೋಜಿಸಿದ್ದ 5ನೇ ವರ್ಷದ ಗೌಡ್ರು ಕ್ರಿಕೆಟ್ ಪ್ರೀಮಿಯರ್ ಲೀಗ್ನಲ್ಲಿ ಕೆಂಗಲ್ ಹನುಮಂತಯ್ಯ ತಂಡವನ್ನು ಮಣಿಸುವ ಮೂಲಕ ಕೆಂಪೇಗೌಡ ತಂಡ ಜಯ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಮೂಲಕ ₹30 ಸಾವಿರ ನಗದು ಬಹುಮಾನ ಪಡೆದುಕೊಂಡಿತು.

ರನ್ನರ್ ಅಪ್ ಆದ ಕೆಂಗಲ್ ಹನುಮಂತಯ್ಯ ತಂಡಕ್ಕೆ ₹20 ಸಾವಿರ ನಗದು ಹಾಗೂ ತೃತೀಯ ಸ್ಥಾನ ಪಡೆದ ರಣ ಭೈರೇಗೌಡ ತಂಡಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಲಾಯಿತು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಒಟ್ಟು ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕೆಂಪೇಗೌಡ ತಂಡ, ರಣಭೈರೇಗೌಡ, ಕೆಂಗಲ್ ಹನುಮಂತಯ್ಯ ತಂಡ, ಕುವೆಂಪು ತಂಡ, ಬಿಜಿಎಸ್ ತಂಡ, ಓಂಕಾರೇಶ್ವರ ಸ್ವಾಮಿ ತಂಡ ಸೇರಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಾದಹಳ್ಳಿ ಮಹೇಶ್, ವಿಜಯಪುರ ಒಕ್ಕಲಿಗರ ಸಂಘದ ಅಧ್ಯಕ್ಷ ಭೈರೇಗೌಡ, ವಿ.ರವಿ, ಸಿ.ನಾರಾಯಣಸ್ವಾಮಿ, ಜೆಡಿಎಸ್ ಮನೋಹರ್, ಮಂಜುನಾಥ್, ಪುನೀತ್ ಗೌಡ, ಕಿರಣ್ ಗೌಡ, ಸುಭಾಷ್ ಗೌಡ, ಆರ್.ವಿ.ಅನಿಲ್, ಜೀವನ್ ಗೌಡ, ರಾಕೇಶ್ ಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-15-280671294

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.