ಸೋಮವಾರ, ಜೂನ್ 14, 2021
27 °C

10 ಜಾಕಿಗಳಿಗೆ ಕೋವಿಡ್‌: ಬಿಟಿಸಿಗೆ ಬೀಗ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹತ್ತು ಮಂದಿ ಜಾಕಿಗಳಿಗೆ ಕೋವಿಡ್‌–19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಟರ್ಫ್‌ ಕ್ಲಬ್ (ಬಿಟಿಸಿ) ಕಚೇರಿಯನ್ನು ಸೋಮವಾರ ಸ್ಯಾನಿಟೈಜ್‌ ಮಾಡುವ ಉದ್ದೇಶದಿಂದ ಬಂದ್‌ ಮಾಡಲಾಗಿದೆ.

ಬೆಂಗಳೂರು ಮೂಲದ 55 ಜಾಕಿಗಳು ಬಿಟಿಸಿಯ ಟ್ರ್ಯಾಕ್‌ನಲ್ಲಿ ತರಬೇತಿ ನಡೆಸಲು ಯೋಜಿಸಿದ್ದರು. ಹೀಗಾಗಿ ಅವರಿಗೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ‘ನೆಗೆಟಿವ್‌‘ ಪ್ರಮಾಣಪತ್ರ ತರುವಂತೆ ಕ್ಲಬ್‌ ಅಧಿಕಾರಿಗಳು ಸೂಚಿಸಿದ್ದರು. 

ಎಲ್ಲ ಜಾಕಿಗಳ ಪರವಾನಗಿಯನ್ನು ಇತ್ತೀಚೆಗೆ ಬಿಟಿಸಿ ರದ್ದು ಮಾಡಿತ್ತು. ‘ಕೋವಿಡ್‌ ನೆಗೆಟಿವ್‌‘ ಪ್ರಮಾಣಪತ್ರ ತಂದರೆ ಮಾತ್ರ ಪರವಾನಗಿಯನ್ನು ನೀಡಲು ನಿರ್ಧರಿಸಿತ್ತು.

ಕೊರೊನಾ ಸೋಂಕಿತ ಜಾಕಿಗಳಲ್ಲಿ ಒಬ್ಬರು ಈಚೆಗೆ ಕ್ಲಬ್‌ಗೆ ಭೇಟಿ ನೀಡಿದ್ದರು ಎನ್ನಲಾಗಿದೆ.

‘ಜಾಕಿ ಕ್ಲಬ್‌ ಕಚೇರಿಗೆ ಪ್ರವೇಶ ಮಾಡಿದ್ದ ಹಿನ್ನೆಲೆಯಲ್ಲಿ ಎಲ್ಲ ಉದ್ಯೋಗಿಗಳಿಗೆ ಕ್ಲಬ್‌ ಖಾಲಿ ಮಾಡಲು ಹೇಳಲಾಗಿದೆ. ಇಡೀ ಕ್ಲಬ್‌ ಸ್ಯಾನಿಟೈಜ್‌ ಆಗಬೇಕು. ಒಂದೆರಡು ದಿನಗಳ ಕಾಲ ಕ್ಲಬ್‌ ಕಚೇರಿ ಬಂದ್‌ ಆಗಿರಲಿದೆ‘ ಎಂದು ಬಿಟಿಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.