ಭಾನುವಾರ, ಸೆಪ್ಟೆಂಬರ್ 26, 2021
23 °C

ಮಹಿಳಾ ಹಾಕಿ ತಂಡ ಪದಕ ಗೆದ್ದರೆ ಮನೆ ನಿರ್ಮಿಸಲು ಹಣ, ಕಾರು: ವಜ್ರದ ವ್ಯಾಪಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿನಗರ (ಗುಜರಾತ್‌): ಭಾರತ ಮಹಿಳಾ ಹಾಕಿ ತಂಡವೇನಾದರೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ತಂದರೆ, ತಂಡದ ಪ್ರತಿ ಆಟಗಾರರಿಗೆ ಮನೆ ನಿರ್ಮಿಸಲು ಹಣ ಮತ್ತು ಕಾರು ನೀಡುವುದಾಗಿ ಗುಜರಾತ್‌ ಮೂಲದ ಉದ್ಯಮಿ  ಸಾವ್ಜಿ ಧೋಲಾಕಿಯಾ ಘೋಷಿಸಿದ್ದಾರೆ. 

ಈ ಕುರಿತು ಇತ್ತೀಚೆಗೆ ಟ್ವೀಟ್‌ ಮಾಡಿರುವ ಅವರು, ‘ನಮ್ಮ ಮಹಿಳಾ ಹಾಕಿ ತಂಡದ ಆಟಗಾರರನ್ನು ಗೌರವಿಸಲು ‘ಎಚ್‌ಕೆ ಸಮೂಹ‘ ನಿರ್ಧರಿಸಿದೆ. ಒಂದು ವೇಳೆ ಭಾರತ ಮಹಿಳಾ ಹಾಕಿ ತಂಡವೇನಾದರೂ ದೇಶಕ್ಕೆ ಪದಕ ಗೆದ್ದು ತಂದರೆ, ತಂಡದ ಪ್ರತಿಯೊಬ್ಬರಿಗೂ ಮನೆ ಕಟ್ಟಿಕೊಳ್ಳಲು ₹11 ಲಕ್ಷ ಹಣ ನೀಡಲಾಗುವುದು. ಈಗಾಗಲೇ ಮನೆ ಹೊಂದಿರುವವರಿಗೆ ₹5 ಲಕ್ಷ ಮೌಲ್ಯದ ಹೊಸ ಕಾರು ಕೊಡಿಸಲಾಗುವುದು,’ ಎಂದು ಅವರು ಹೇಳಿದ್ದಾರೆ. 

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರು ಪ್ರತಿ ಹೆಜ್ಜೆಯಲ್ಲೂ ಇತಿಹಾಸ ಬರೆಯುತ್ತಿದ್ದಾರೆ. ಆಸ್ಟ್ರೇಲಿಯಾವನ್ನು ಸೋಲಿಸಿ ನಾವು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದೇವೆ. ನಮ್ಮ ಆಟಗಾರರ ಮನೋಸ್ಥೈರ್ಯವನ್ನು ಹೆಚ್ಚಿಸಲು ಇದು ನಮ್ಮ ವಿನಮ್ರ ಪ್ರಯತ್ನ,’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. 

ವಜ್ರದ ವ್ಯಾಪಾರಿ ಸಾವ್ಜಿ 2018ರ ದೀಪಾವಳಿಯಲ್ಲಿ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಕಾರು ಉಡುಗೊರೆಯಾಗಿ ನೀಡಿ ದೇಶದ ಗಮನಸೆಳೆದಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು