ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿರುದ್ಧ ಹೋರಾಟ: ₹ 30 ಸಾವಿರ ನೀಡಿದ 15ರ ಹರೆಯದ ಶೂಟರ್‌

Last Updated 29 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಹದಿಹರೆಯು ಶೂಟಿಂಗ್ ಸ್ಪರ್ಧಿ ಇಶಾ ಸಿಂಗ್‌, ಕೋವಿಡ್‌ ಸಾಂಕ್ರಾಮಿಕ ಪಿಡುಗು ವಿರುದ್ಧ ಹೋರಾಡಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ ₹ 30 ಸಾವಿರ ದೇಣಿಗೆ ನೀಡುವುದಾಗಿ ಭಾನುವಾರ ತಿಳಿಸಿದ್ದಾಳೆ. ಈ ರೀತಿ ದೇಣಿಗೆ ನೀಡಿದ ದೇಶದ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿದ್ದಾಳೆ.

‘ನನ್ನ ಉಳಿತಾಯದ ಹಣದಿಂದ ಈ ದೇಣಿಗೆ ನೀಡುತ್ತೇನೆ. ದೇಶವಿದ್ದರೆ ನಾವು ಇರುತ್ತೇವೆ‘ ಎಂದು 15 ವರ್ಷದ ಇಶಾ ಟ್ವಿಟರ್‌ನಲ್ಲಿ
ಬರೆದಿದ್ದಾಳೆ.

ಜೂನಿಯರ್‌ ವಿಶ್ವಕಪ್‌ನಲ್ಲಿ, ಹೈದರಾಬಾದ್‌ನ ಇಶಾ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಳು.

ದೇಣಿಗೆ ನೀಡಿದ ರಿಚಾ, ಶರದ್‌: ಪ್ಯಾರಾ ಅಥ್ಲೀಟ್‌ ಶರದ್‌ ಕುಮಾರ್‌ ಮತ್ತು ಪಶ್ಚಿಮ ಬಂಗಾಳದ ಕ್ರಿಕೆಟ್‌ ಆಟಗಾರ್ತಿ ರಿಚಾ ಘೋಷ್‌ ಅವರು ಕೋವಿಡ್‌ನಿಂದ ಬಳಲುತ್ತಿರುವವರ ನೆರವಿಗೆ ಧಾವಿಸಿದ್ದಾರೆ. ಇವರು ಶನಿವಾರ ತಲಾ ₹ 1 ಲಕ್ಷ ದೇಣಿಗೆ ನೀಡಿದ್ದಾರೆ.ಹೈಜಂಪ್‌ ಸ್ಪರ್ಧಿ ಶರದ್‌, 2014 ಮತ್ತು 2018ರಲ್ಲಿ ನಡೆದಿದ್ದ ಏಷ್ಯನ್‌ ಪ್ಯಾರಾ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. 2017ರಲ್ಲಿ ಆಯೋಜನೆಯಾಗಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರಿಂದ ಬೆಳ್ಳಿಯ ಪದಕದ ಸಾಧನೆ ಮೂಡಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT