ಕುಸ್ತಿ: ಭಾರತ ತಂಡದಲ್ಲಿ ದೀಪಕ್‌, ಸಚಿನ್‌

7

ಕುಸ್ತಿ: ಭಾರತ ತಂಡದಲ್ಲಿ ದೀಪಕ್‌, ಸಚಿನ್‌

Published:
Updated:

ನವದೆಹಲಿ: ವಿಶ್ವ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ಗಾಗಿ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) 30 ಮಂದಿ ಕುಸ್ತಿಪಟುಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. 

ಈ ಋತುವಿನಲ್ಲಿ ಉತ್ತಮ ಸಾಮರ್ಥ್ಯ ತೋರಿರುವ ದೀಪಕ್‌ ಪುನಿಯಾ ಹಾಗೂ ಸಚಿನ್‌ ರಾಟಿ ಅವರು  ತಂಡದಲ್ಲಿದ್ದಾರೆ. ಸೆಪ್ಟೆಂಬರ್‌ 17ರಿಂದ 23ರವರೆಗೆ ಸ್ಲೋವಾಕಿಯಾದಲ್ಲಿ ಕುಸ್ತಿ ಚಾಂಪಿಯನ್‌ಷಿಪ್‌ ನಡೆಯಲಿದೆ. 

ಸೂರಜ್‌, ಸಂದೀಪ್‌ ಸಿಂಗ್‌ ಮಾನ್‌ ಅವರೂ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ತಂಡದಲ್ಲಿರುವ ಯುವ ಕುಸ್ತಿಪಟುಗಳು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಎಂಟು ಪದಕಗಳನ್ನು ಗೆದ್ದಿದ್ದರು. ಇದರಲ್ಲಿ ಎರಡು ಚಿನ್ನದ ಪದಕಗಳು ಸೇರಿವೆ. 

‘ಈ ಯುವ ಪ್ರತಿಭಾಶಾಲಿಗಳ ಮೇಲೆ ಸಾಕಷ್ಟು ಭರವಸೆ ಇದೆ. ಈ ಕುಸ್ತಿಪಟುಗಳು ಹಾಗೂ ಅವರ ಕೋಚ್‌ಗಳು ಹೆಚ್ಚಿನ ಪರಿಶ್ರಮ ಹಾಕಿದ್ದಾರೆ. ಪ್ರತಿ ವಿಭಾಗದಲ್ಲೂ ಅವರು ಉತ್ತಮ ಸಾಮರ್ಥ್ಯ ತೋರುವ ನಂಬಿಕೆ ಇದೆ’ ಎಂದು ಡಬ್ಲ್ಯುಎಫ್‌ಐನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !