ಏಷ್ಯನ್ ಗೇಮ್ಸ್‌ಗೆ ಭಾರತದ 514 ಅಥ್ಲೀಟ್‌ಗಳು

7

ಏಷ್ಯನ್ ಗೇಮ್ಸ್‌ಗೆ ಭಾರತದ 514 ಅಥ್ಲೀಟ್‌ಗಳು

Published:
Updated:

ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ  ಭಾರತದ 514 ಅಥ್ಲೀಟ್‌ಗಳು ಭಾಗವಹಿಸಲು ಭಾರತ ಒಲಿಂಪಿಕ್ ಸಂಸ್ಥೆಯು  ಅನುಮತಿ ನೀಡಿದೆ.

ಹೋದ  ಬಾರಿಯ ಕೂಟಕ್ಕೆ ತೆರಳಿದ್ದ ತಂಡದಲ್ಲಿ 541 ಅಥ್ಲೀಟ್‌ಗಳು ಇದ್ದರು ಈ ಬಾರಿ ಅದಕ್ಕಿಂತಲೂ ಕಡಿಮೆ ಸಂಖ್ಯೆಯ ತಂಡವನ್ನು ಕಳಿಸಲಾಗುತ್ತಿದೆ.

 ‘ಅಂದಾಜು 514 ಅಥ್ಲೀಟ್‌ಗಳಿಗೆ ಅನುಮತಿ ನೀಡಲಾಗಿದೆ. ಇನ್ನೂ ಕೆಲವರನ್ನು ಸೇರಿಸುವ ಸಾಧ್ಯತೆ ಇದೆ. ಅಂತಿಮ ಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು’ ಎಂದು ಐಒಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ವಿವಿಧ ಕ್ರೀಡೆಗಳ ರಾಷ್ಟ್ರೀಯ ಫೆಡರೇಷನ್‌ಗಳು ಅರ್ಹತೆ ಪಡೆದ ಕ್ರೀಡಾಪಟುಗಳ ಪಟ್ಟಿಯನ್ನು ಕಳಿಸಲು ಜೂನ್ 30ರವರೆಗೆ ಅವಕಾಶ ನೀಡಲಾಗಿತ್ತು. 

‘ಈ ಬಾರಿ ತಂಡದ ಆಯ್ಕೆಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗಿದೆ. ಹೋದ ಸಲದ ಕೂಟದಲ್ಲಿ  ವೈಯಕ್ತಿಕ ವಿಭಾಗಗಳಲ್ಲಿ ಅಗ್ರ ಆರು ಸ್ಥಾನಗಳನ್ನು ಪಡೆದ ಆರು ಅಥ್ಲೀಟ್‌ಗಳು, ತಂಡ ವಿಭಾಗದಲ್ಲಿ ಎಂಟು ಸ್ಥಾನ ಗಳಿಸಿದವರಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !