ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕೂಟದ ಸಾಧನೆ ತಂದ ಬದಲಾವಣೆ: ಮಣಿಕಾ ಬಾತ್ರಾ

Last Updated 23 ಫೆಬ್ರುವರಿ 2022, 15:30 IST
ಅಕ್ಷರ ಗಾತ್ರ

ನವದೆಹಲಿ: ಹೋದ ಸಲದ ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ ತಮ್ಮ ಆಟ ಮತ್ತು ವ್ಯಕ್ತಿತ್ವದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಇದರಿಂದಾಗಿ ಉನ್ನತ ಸಾಧನೆ ಮಾಡುವ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ ಹೇಳಿದ್ದಾರೆ.

ಅವರು ಈಚೆಗೆ ವಿಶ್ವ ಟೇಬಲ್ ಟೆನಿಸ್‌ ರ‍್ಯಾಂಕಿಂಗ್‌ ನಲ್ಲಿ ಅಗ್ರ 50ರಲ್ಲಿ ಸ್ಥಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಟಾಪ್ 30ರೊಳಗೆ ಸ್ಥಾನ ಗಳಿಸುವ ವಿಶ್ವಾಸದಲ್ಲಿದ್ದಾರೆ.

2018ರಲ್ಲಿ ಅವರು ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಿಂಗಲ್ಸ್‌ ಮತ್ತು ತಂಡ ವಿಭಾಗಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಅದೇ ವರ್ಷ ಏಷ್ಯನ್ ಕ್ರೀಡಾಕೂಟದಲ್ಲಿ ಶರತ್ ಕಮಲ್ ಜೊತೆಗೂಡಿ ಮಿಶ್ರ ಡಬಲ್ಸ್‌ನಲ್ಲಿಯೂ ಚಿನ್ನದ ಸಾಧನೆ ಮಾಡಿದ್ದರು.

ಮಣಿಕಾ ಆ ಸಾಧನೆಯನ್ನು ಈ ಬಾರಿಯೂ ಮುಂದುವರಿಸುವ ಛಲದಲ್ಲಿದ್ದಾರೆ. ಇದೇ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್ ಕೂಟ ಮತ್ತು ಚೀನಾದಲ್ಲಿ ಏಷ್ಯನ್ ಕ್ರೀಡಾಕೂಟ ಆಯೋಜನೆಗೊಳ್ಳಲಿವೆ.

‘ಹೋದ ಸಲದ ಕಾಮನ್‌ವೆಲ್ತ್ ಕೂಟದ ಸಾಧನೆಯು ನನ್ನ ಜೀವನಕ್ಕೆ ಹೊಸ ತಿರುವು ಕೊಟ್ಟಿತು. ಫಿಟ್‌ನೆಸ್, ಕೌಶಲಗಳು ಬಹಳಷ್ಟು ವೃದ್ಧಿಸಿವೆ. ನಾನು ಎತ್ತರವಾಗಿರುವುದರಿಂದ ವಿಭಿನ್ನವಾದ ಅಭ್ಯಾಸ ಶೈಲಿಯನ್ನು ರೂಢಿಸಿಕೊಳ್ಳಬೇಕಿದೆ. ಅದಕ್ಕಾಗಿ ಹೆಚ್ಚು ಪರಿಶ್ರಮ ಅಗತ್ಯ’ ಎಂದು 49ನೇ ಶ್ರೇಯಾಂಕದ ಆಟಗಾರ್ತಿ ಮಣಿಕಾ ಹೇಳಿದ್ದಾರೆ.

‘ಈ ವರ್ಷ ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಗಳು ನಡೆಯಲಿವೆ. ಅವುಗಳಲ್ಲಿ ಜಯಿಸಬೇಕು ಎಂಬುದು ಮನದಲ್ಲಿದೆ. ಆದರೆ ತರಬೇತಿಯ ಮೇಲೆ ಹಚ್ಚು ಗಮನ ಕೇಂದ್ರಿಕರಿಸಿದ್ದೇನೆ. 2024ರ ಒಲಿಂಪಿಕ್ಸ್‌ನಲ್ಲಿಯೂ ಪದಕ ಸಾಧನೆಯ ಛಲದೊಂದಿಗೆ ಅಭ್ಯಾಸ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT