ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಅಭಿಷೇಕ್ ಸೈನಿಗೆ ಪ್ರಶಸ್ತಿ

ಬಾಂಗ್ಲಾದೇಶ ಚಾಲೆಂಜ್‌ ಬ್ಯಾಡ್ಮಿಂಟನ್ ಟೂರ್ನಿ: ಋತ್ವಿಕ್ ರನ್ನರ್ಸ್ಅಪ್‌
Last Updated 6 ಡಿಸೆಂಬರ್ 2021, 13:14 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಭಾರತದ ಅಭಿಷೇಕ್ ಸೈನಿ ಅವರು ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು21-15 21-18 ಭಾರತದವರೇ ಆದ ಋತ್ವಿಕ್ ಸಂಜೀವಿ ಅವರನ್ನು ಮಣಿಸಿದರು. 34 ನಿಮಿಷಗಳಲ್ಲಿ ಪಂದ್ಯ ಅಂತ್ಯವಾಯಿತು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸೈನಿ 17-21, 21-15, 21-15ರಿಂದ ಭಾರತದ ಕಾರ್ತಿಕೇಯ ಗುಲ್ಶನ್‌ ಕುಮಾರ್‌ ಎದುರು, ಋತ್ವಿಕ್ 21-13, 19-21, 21-14ರಿಂದ ಇಂಡೊನೇಷ್ಯಾದ ಸುಲಿಸ್ತಿಯೊ ಟೆಗರ್‌ ವಿರುದ್ಧ ಗೆದ್ದಿದ್ದರು.

ಮಹರಿನ್‌ ರಿಜಾ–ಆರತಿಗೆ ಡಬಲ್ಸ್ ಗರಿ: ಇದೇ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಮೆಹರೀನ್ ರಿಜಾ– ಆರತಿ ಸಾರಾ ಸುನಿಲ್ ಅವರು ಪ್ರಶಸ್ತಿಗೆ ಮುತ್ತಿಕ್ಕಿದರು. ಫೈನಲ್‌ನಲ್ಲಿ ಇವರು22-20, 21-12ರಿಂದ ಮಲೇಷ್ಯಾದ ಕಸ್ತೂರಿ ರಾಧಾಕೃಷ್ಣನ್ ಮತ್ತು ವೆನೋಶಾ ರಾಧಾಕೃಷ್ಣ ಅವರನ್ನು ಸೋಲಿಸಿದರು.

ಮಿಶ್ ರಡಬಲ್ಸ್‌ನಲ್ಲಿ ಪ್ರತೀಕ್ ರಾನಡೆ ಮತ್ತು ಅಕ್ಷಯ್‌ ವಾರಂಗ್ ರನ್ನರ್ಸ್ ಅಪ್ ಆದರು. ಫೈನಲ್‌ನಲ್ಲಿ ಈ ಜೋಡಿಯು 15-21, 18-21ರಿಂದ ಶ್ರೀಲಂಕಾದ ಸಚಿನ್ ದಿಯಾಸ್‌ ಮತ್ತು ಕವಿದಿ ಸಿರಿಮನ್ನಗೆ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT