ಸೋಮವಾರ, ಅಕ್ಟೋಬರ್ 21, 2019
23 °C

ಬ್ಯಾಡ್ಮಿಂಟನ್: ಅದಿತಿ, ರೋಹನ್‌ ಪ್ರೀ ಕ್ವಾರ್ಟರ್‌ಗೆ

Published:
Updated:

ಕಜಾನ್, ರಷ್ಯಾ: ಭಾರತದ ಅದಿತಿ ಭಟ್ ಮತ್ತು ರೋಹನ್ ಗುರ್ಬಾನಿ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

ಅದಿತಿ, 13ನೇ ಶ್ರೇಯಾಂಕದ ಆಟಗಾರ್ತಿ ಥಾಯ್ಲೆಂಡ್‌ನ ಅತೀತಾಯ ಪೊವನೊನ್ ವಿರುದ್ಧ 14–21, 21–14,22–20ರಲ್ಲಿ ಗೆದ್ದರೆ, ರೋಹನ್ 21–7, 21–16ರಲ್ಲಿ ಆಸ್ಟ್ರಿಯಾದ ನಿಕೋಲಸ್ ರುಡಾಲ್ಫ್‌ ವಿರುದ್ಧ ಜಯ ಗಳಿಸಿದರು.

ತಸ್ನಿಮ್ ಮಿರ್ ಮತ್ತು ತ್ರಿಶಾ ಹೆಗ್ಡೆ ಸೋತು ಹೊರಬಿದ್ದರು. ತಸ್ನಿಮ್ 13–21, 19–21ರಲ್ಲಿ ಚೀನಾ ತೈಪೆಯ ಹಂಗ್ ಎನ್ ಸು ಎದುರು ಸೋತರೆ, ತ್ರಿಶಾ ಹಂಗರಿಯ ವಿವೇನ್ ಸ್ಯಾಂಡರ್‌ಹಜಿ ವಿರುದ್ಧ 16–21, 12–21ರಲ್ಲಿ ಸೋತರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)