ಭಾನುವಾರ, ಡಿಸೆಂಬರ್ 8, 2019
21 °C

ಗಾಲ್ಫ್‌: ಅದಿತಿಗೆ ಜಂಟಿ ಐದನೇ ಸ್ಥಾನ

Published:
Updated:
Deccan Herald

ಸಿಟ್ಗೆಸ್‌, ಸ್ಪೇನ್‌: ಭಾರತದ ಅದಿತಿ ಅಶೋಕ್‌ ಅವರು ಎಸ್ಟ್ರೆಲ್ಲಾ ಡ್ಯಾಮ್‌ ಮೆಡಿಟರೇನಿಯನ್‌ ಮಹಿಳೆಯರ ಓಪನ್‌ ಗಾಲ್ಫ್‌ ಟೂರ್ನಿಯಲ್ಲಿ ಜಂಟಿ ಐದನೇ ಸ್ಥಾನ ಪಡೆದಿದ್ದಾರೆ. 

ಮಂಗಳವಾರ ನಡೆದ ಕೊನೆಯ ಸುತ್ತಿನಲ್ಲಿ ಅದಿತಿ ಅವರು 69 ಸ್ಕೋರ್‌ ಗಳಿಸಿದರು. ದಕ್ಷಿಣ ಆಫ್ರಿಕಾದ ಆ್ಯಶ್ಲೆ ಬುಹೈ ಅವರು 69 ಸ್ಕೋರ್‌ ಸಂಗ್ರಹಿಸಿದರು. ಹೀಗಾಗಿ ಉಭಯ ಗಾಲ್ಫರ್‌ಗಳು ಜಂಟಿ ಐದನೇ ಸ್ಥಾನ ಪಡೆದರು. 

ನೆದರ್ಲೆಂಡ್ಸ್‌ನ ಅನ್ನೆ ವ್ಯಾನ್‌ ಡ್ಯಾಮ್‌ ಅವರು 65 ಸ್ಕೋರ್‌ ಗಳಿಸಿ ಅಗ್ರಸ್ಥಾನ ಪಡೆದರು. ಅವರು ನಾಲ್ಕು ಸುತ್ತುಗಳಲ್ಲಿ ಒಟ್ಟು 258 ಸ್ಕೋರ್‌ ಸಂಗ್ರಹಿಸಿದರು. 

ಕ್ಯಾರೋಲಿನ್‌ ಹೆಡ್‌ವೆಲ್‌, ಕ್ಯಾರೋಲಿನ್‌ ಮಸ್ಸೂನ್‌ ಹಾಗೂ ಸೆಲಿನ್‌ ಹ್ಯುನ್‌ ಅವರು ಜಂಟಿ ಎರಡನೇ ಸ್ಥಾನ ಪಡೆದರು. 

 

ಪ್ರತಿಕ್ರಿಯಿಸಿ (+)