ಸೋಮವಾರ, ಮೇ 17, 2021
21 °C

ಆನ್‌ಲೈನ್‌ ಮೂಲಕ ಪ್ರಮಾಣ ಪತ್ರ ನೀಡಲಿರುವ ಎಎಫ್‌ಐ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಆನ್‌ಲೈನ್‌ ಸೆಮಿನಾರ್‌ನಲ್ಲಿ ಪಾಲ್ಗೊಂಡಿದ್ದ ತಾಂತ್ರಿಕ ಅಧಿಕಾರಿಗಳಿಗೆ ಆನ್‌ಲೈನ್‌ನಲ್ಲೇ ಪ್ರಮಾಣ ಪತ್ರ ಸಿಗುವಂತಹ ವ್ಯವಸ್ಥೆಯನ್ನು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) ಮಾಡಿದೆ.

ಎಎಫ್‌ಐ ಹಾಗೂ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್‌ ಫೆಡರೇಷನ್‌ನ ಸಹಯೋಗದಲ್ಲಿ ಏಪ್ರಿಲ್‌ 25ರಿಂದ 30ರವರೆಗೆ ನಡೆದಿದ್ದ ಸೆಮಿನಾರ್‌ನಲ್ಲಿ 1,000 ಮಂದಿ ಪಾಲ್ಗೊಂಡಿದ್ದರು. 

‘ತಾಂತ್ರಿಕ ಅಧಿಕಾರಿಗಳ ಜ್ಞಾನವನ್ನು ವೃದ್ಧಿಸುವ ಹಾಗೂ ಅವರಿಗೆ ಹೊಸ ವಿಷಯಗಳನ್ನು ಪರಿಚಯಿಸುವ ಸದುದ್ದೇಶದಿಂದ ಆಯೋಜಿಸಿದ್ದ ಆನ್‌ಲೈನ್‌ ಸೆಮಿನಾರ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕೊರೊನಾ ವೈರಾಣುವಿನ ಉಪಟಳದಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ. ಹೀಗಾಗಿ ಆನ್‌ಲೈನ್‌ನಲ್ಲೇ ಪ್ರಮಾಣ ಪತ್ರಗಳು ಸಿಗುವಂತೆ ವ್ಯವಸ್ಥೆ ಮಾಡಿದ್ದೇವೆ. ಸೆಮಿನಾರ್‌ನಲ್ಲಿ ಭಾಗವಹಿಸಿದ್ದವರು ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು’ ಎಂದು ಎಎಫ್‌ಐ ಅಧ್ಯಕ್ಷ ಆದಿಲ್‌ ಸುಮರಿವಾಲಾ ಭಾನುವಾರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು