ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌ ಆತಿಥ್ಯ: ಹಕ್ಕು ಕಳೆದುಕೊಂಡ ಭಾರತ

Last Updated 29 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: 2021ರ ವಿಶ್ವಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸುವ ಹಕ್ಕು ಮಂಗಳವಾರ ಭಾರತದ ಕೈ ತಪ್ಪಿದೆ. ರಾಷ್ಟ್ರೀಯ ಫೆಡರೇಷನ್‌ ಆತಿಥ್ಯದ ಶುಲ್ಕ ಭರಿಸದ ಕಾರಣ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಅಸೋಸಿಯೇಷನ್‌ (ಎಐಬಿಎ) 2017ರ ಒಪ್ಪಂದವನ್ನು ಅಂತ್ಯಗೊಳಿಸಿದೆ. ಈಗ ಆತಿಥ್ಯದ ಹಕ್ಕು ಸರ್ಬಿಯಾ ಪಾಲಾಗಿದೆ. ಚಾಂಪಿಯನ್‌ಷಿಪ್‌ ದೆಹಲಿಯಲ್ಲಿ ನಡೆಯಬೇಕಿತ್ತು.

ಒಪ್ಪಂದದ ಪ್ರಕಾರ ಉಲ್ಲೇಖಿಸಿದ ಶುಲ್ಕವನ್ನು ದೆಹಲಿ ಭರಿಸದ ಕಾರಣ ಒಪ್ಪಂದವನ್ನು ಅಂತ್ಯಗೊಳಿಸಲಾಗಿದೆ. ಆದ್ದರಿಂದ ಭಾರತ, ಒಪ್ಪಂದ ರದ್ದಾದ ಕಾರಣ ₹ 38,000 ದಂಡ ಪಾವತಿಸಬೇಕು’ ಎಂದು ಎಐಬಿಎ ಹೇಳಿದೆ.

ಈ ಪ್ರಮುಖ ಚಾಂಪಿಯನ್‌ಷಿಪ್‌ ಮೊದಲ ಬಾರಿ ಭಾರತದಲ್ಲಿ ನಡೆಯಬೇಕಿತ್ತು. ಈಗ ಸರ್ಬಿಯದ ಬೆಲ್‌ಗ್ರೇಡ್‌ ಇದನ್ನು ಆಯೋಜಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT