ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಐಶ್ವರಿಪ್ರತಾಪ್‌ಗೆ ಆರನೇ ಸ್ಥಾನ

Last Updated 27 ಜೂನ್ 2021, 21:01 IST
ಅಕ್ಷರ ಗಾತ್ರ

ಒಸಿಜೆಕ್‌, ಕ್ರೊವೇಷ್ಯಾ: ಭಾರತದ ಐಶ್ವರಿಪ್ರತಾಪ್ ಸಿಂಗ್ ತೋಮರ್ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನ 50 ಮೀ. ರೈಫಲ್ ತ್ರಿ ಪೊಸಿಷನ್ಸ್‌ ವಿಭಾಗದಲ್ಲಿ ಆರನೇ ಸ್ಥಾನ ಗಳಿಸಿದರು.

ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಇದೇ ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದರು.

20 ವರ್ಷದ ತೋಮರ್‌ 1176 ಸ್ಕೋರ್‌ ದಾಖಲಿಸಿ ಏಳನೆಯವರಾಗಿ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಈ ವಿಭಾಗದ ಚಿನ್ನವು ಉಕ್ರೇನ್‌ನ ಸೆರ್ಹಿಯ ಕುಲಿಶ್ ಪಾಲಾಯಿತು. ರಷ್ಯಾದ ಸೆರ್ಜೆಯ್ ಕಮೆನ್‌ಸ್ಕಿಯ್ ಬೆಳ್ಳಿ ಮತ್ತು ಸ್ಲೋವಾಕಿಯಾದ ಪ್ಯಾಟ್ರಿಕ್ ಜಾನಿ ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT