ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ನೀಗುವುದೇ 21 ವರ್ಷಗಳ ಪ್ರಶಸ್ತಿ ಬರ?

ಆಲ್‌ ಇಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಕಣದಲ್ಲಿ ಸಿಂಧು, ಸೇನ್, ಶ್ರೀಕಾಂತ್
Last Updated 16 ಮಾರ್ಚ್ 2022, 10:04 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: 21 ವರ್ಷಗಳ ಪ್ರಶಸ್ತಿ ಬರ ನೀಗುವ ನಿರೀಕ್ಷೆಯೊಂದಿಗೆ ಭಾರತದ ಬ್ಯಾಡ್ಮಿಂಟನ್‌ ಪಟುಗಳು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಬುಧವಾರ ಇಲ್ಲಿ ಆರಂಭವಾಗುವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು, ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಕಿದಂಬಿ ಶ್ರೀಕಾಂತ್‌, ಫಾರ್ಮ್‌ನಲ್ಲಿರುವ ಯುವ ಆಟಗಾರ ಲಕ್ಷ್ಯ ಸೇನ್‌ ಅವರು ಭಾರತದ ಭರವಸೆ ಎನಿಸಿದ್ದಾರೆ.

ಭಾರತದ ಪುಲ್ಲೇಲ ಗೋಪಿಚಂದ್‌ (2001) ಮತ್ತು ಪ್ರಕಾಶ್‌ ಪಡುಕೋಣೆ (1980) ಅವರಿಗೆ ಇದುವರೆಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದಿತ್ತು. ಪ್ರಮುಖ ಆಟಗಾರರಾದ ಶ್ರೀಕಾಂತ್‌, ಸಿಂಧು ಮತ್ತು ಸೈನಾ ಅವರಿಗೆ ಮರೀಚಿಕೆಯಾಗಿದೆ.

2015ರಲ್ಲಿ ಸೈನಾ ಅವರು ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಿದ್ದರು.

2019ರ ವಿಶ್ವ ಚಾಂಪಿಯನ್‌ ಸಿಂಧು ಅವರಿಗೆ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಚೀನಾದ ವಾಂಗ್‌ ಝಿ ಯಿ ಸವಾಲು ಎದುರಾಗಿದೆ. ಇತ್ತೀಚೆಗೆ ಕೊನೆಗೊಂಡ ಜರ್ಮನ್‌ ಓಪನ್ ಟೂರ್ನಿಯಲ್ಲಿ ಭಾರತದ ಆಟಗಾರ್ತಿ ಎರಡನೇ ಸುತ್ತಿನಲ್ಲೇ ಎಡವಿದ್ದರು.

ಜರ್ಮನ್‌ ಓಪನ್ ಟೂರ್ನಿಯಲ್ಲಿ ಥಾಯ್ಲೆಂಡ್‌ನ ರಚನಾಕ್ ಇಂತನಾನ್‌ ಎದುರು ಪರದಾಡಿದ್ದ ಸೈನಾ ಅವರಿಗೂ ಇಲ್ಲಿಯೂ ಮೊದಲ ಸುತ್ತಿನಲ್ಲಿ ಭಾರಿ ಸವಾಲು ಎದುರಾಗಿದೆ. ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಥಾಯ್ಲೆಂಡ್‌ ಆಟಗಾರ್ತಿ ಪಾರ್ನ್‌ಪವಿ ಚೊಚುವಾಂಗ್ ಅವರು ಸೈನಾ ವಿರುದ್ಧ ಸೆಣಸುವರು.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಲಕ್ಷ್ಯ ಅವರು ಭಾರತದವರೇ ಆದ ಸೌರಭ್ ವರ್ಮಾ ಎದುರು ಆಡಲಿದ್ದಾರೆ. ಉತ್ತಮ ಲಯದಲ್ಲಿರುವ ಶ್ರೀಕಾಂತ್ ಅವರು ಥಾಯ್ಲೆಂಡ್‌ನ ಕಾಂತಫೋನ್‌ ವಾಂಗ್‌ಚೆರೊನ್ ವಿರುದ್ಧ ಕಣಕ್ಕಿಳಿಯುವರು.

ಟೋಕಿಯೊ ಒಲಿಂಪಿಯನ್‌ ಬಿ.ಸಾಯಿ ಪ್ರಣೀತ್‌ ಅವರು ವಿಕ್ಟರ್ ಅಕ್ಸೆಲ್ಸೆನ್‌ ವಿರುದ್ಧ, ಸಮೀರ್ ವರ್ಮಾ ನೆದರ್ಲೆಂಡ್ಸ್‌ನ ಮಾರ್ಕ್‌ ಕಾಲ್ಜೊ ಎದುರು ಆಡಲಿದ್ದು ಶುಭಾರಂಭದ ಹಂಬಲದಲ್ಲಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಎಚ್‌.ಎಸ್‌.ಪ್ರಣಯ್‌, ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ– ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ, ಧ್ರುವ ಕಪಿಲ– ಎಂ.ಆರ್‌.ಅರ್ಜುನ್‌, ಮಹಿಳಾ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿರೆಡ್ಡಿ ಅದೃಷ್ಟಪರೀಕ್ಷೆಗೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT