ಶುಕ್ರವಾರ, ಅಕ್ಟೋಬರ್ 18, 2019
27 °C

ಬಾಲ್‌ ಬ್ಯಾಡ್ಮಿಂಟನ್‌: ಆಳ್ವಾಸ್‌ ತಂಡಗಳು ಶುಭಾರಂಭ

Published:
Updated:

ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಪುರುಷರ ಮತ್ತು ಮಹಿಳಾ ತಂಡದವರು ಬಳ್ಳಾರಿಯಲ್ಲಿ ಆರಂಭವಾದ ಅಖಿಲ ಭಾರತ ಆಹ್ವಾನಿತ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಶುಕ್ರವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಆಳ್ವಾಸ್‌ ತಂಡ 35–11, 35–18ರಲ್ಲಿ ದಾವಣಗೆರೆಯ ಕ್ಲಾಸಿಕ್‌ ಫೈವ್ಸ್‌ ತಂಡವನ್ನು ಮಣಿಸಿತು.

ಇತರ ಪಂದ್ಯಗಳಲ್ಲಿ ರಮಣ ಫೈವ್ಸ್‌ 35–33, 35–32ರಲ್ಲಿ ಹಾಸನದ ಹಾಸನಾಂಭ ಎದುರೂ, ಶ್ರವಣ ಫೈವ್ಸ್‌ 35–26, 35–29ರಲ್ಲಿ ಮೀಡಿಯಾ ವಿಷನ್‌ ಮೇಲೂ, ಎಸ್‌.ಆರ್‌.ಎಂ.ವಿಶ್ವವಿದ್ಯಾಲಯ 35–13, 35–13ರಲ್ಲಿ ಪಾಲಕ್ಕಾಡ್‌ನ ಗ್ಯಾಲಕ್ಸಿ ವಿರುದ್ಧವೂ ಗೆದ್ದವು.

ಮಹಿಳಾ ವಿಭಾಗದ ಪಂದ್ಯದಲ್ಲಿ ಆಳ್ವಾಸ್‌ ತಂಡ 35–20, 35–19ರಲ್ಲಿ ಎಸ್‌.ಆರ್‌.ಬಿ.ಬಿ.ಸಿ ತಂಡವನ್ನು ಸೋಲಿಸಿತು.

ಇತರ ಪಂದ್ಯಗಳಲ್ಲಿ ದಿಂಡಿಗಲ್‌ನ ಪಿ.ಎಸ್‌.ಎನ್‌.ಎ ತಂಡ 28–35, 35–18, 35–18ರಲ್ಲಿ ಜಯಾ ಸ್ಪೋರ್ಟ್ಸ್‌ ಎದುರೂ, ಕೊಯಮತ್ತೂರಿನ ನಿರ್ಮಲಾ 35–20, 35–17ರಲ್ಲಿ ಕಾರುಣ್ಯ ವಿಶ್ವವಿದ್ಯಾಲಯ ಮೇಲೂ, ಶ್ರವಣ ಫೈವ್ಸ್‌ 35–21, 35–29ರಲ್ಲಿ ಎಸ್‌.ಆರ್‌.ಎಂ. ವಿಶ್ವವಿದ್ಯಾಲಯ ವಿರುದ್ಧವೂ ವಿಜಯಿಯಾದವು.

Post Comments (+)