ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಅಂಚೆ ಅಥ್ಲೆಟಿಕ್‌ ಕೂಟ: ಸಂಜಯ್‌ ವೇಗದ ಓಟಗಾರ

ಮಿಂಚಿದ ಶಿಪು ಮೊಂಡಲ್
Last Updated 14 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕದ ವಿ.ಸಂಜಯ್‌ ಅವರು ಇಲ್ಲಿ ಆರಂಭವಾದ 34ನೇ ಅಖಿಲ ಭಾರತ ಅಂಚೆ ಅಥ್ಲೆಟಿಕ್‌ ಕೂಟದಲ್ಲಿ ‘ವೇಗದ ಓಟಗಾರ’ ಗೌರವ ತಮ್ಮದಾಗಿಸಿಕೊಂಡರು.

ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಗುರುವಾರ ನಡೆದ ಪುರುಷರ 100 ಮೀ. ಓಟದಲ್ಲಿ ಸಂಜಯ್‌ 10.9 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮಹಿಳೆಯರ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಶಿಪು ಮೊಂಡಲ್ ಮೊದಲ ಸ್ಥಾನ ಗಳಿಸಿದರು.

ಶಿಪು ಅವರು ಲಾಂಗ್‌ ಜಂಪ್‌ ಮತ್ತು ಹೈಜಂಪ್‌ನಲ್ಲೂ ಚಿನ್ನ ಗೆದ್ದು ಮಿಂಚಿದರು.

ಮೊದಲ ದಿನದ ಫಲಿತಾಂಶಗಳು: ಪುರುಷರ ವಿಭಾಗ: 100 ಮೀ. ಓಟ: ವಿ.ಸಂಜಯ್‌ (ಕರ್ನಾಟಕ)–1, ಆದಿತ್ಯ ವರ್ಧನ್ (ರಾಜಸ್ತಾನ)–2, ಎಸ್‌.ಎ.ರಸಲ್ (ಮಹಾರಾಷ್ಟ್ರ)–3. ಕಾಲ: 10.9 ಸೆ. 1,500 ಮೀ. ಓಟ: ರಾಜ್‌ಕುಮಾರ್ (ರಾಜಸ್ಥಾನ)–1, ಓಂಪ್ರಕಾಶ್ (ಕರ್ನಾಟಕ)–2, ಎನ್‌.ಶಿವ (ಆಂಧ್ರಪ್ರದೇಶ)–3. ಕಾಲ: 4 ನಿ.10.09 ಸೆ.

ಹೈಜಂಪ್‌: ಎಲ್‌.ಸಿ.ಚಾವ್ಡಾ (ಗುಜರಾತ್)–1, ದೀಪೇಂದ್ರ ಸಿಂಗ್ (ರಾಜಸ್ಥಾನ)–2, ಆರ್‌.ಚೆಲ್ಲದುರೈ ಪಾಂಡಿ (ತಮಿಳುನಾಡು)–3. ಎತ್ತರ: 1.65 ಮೀ. ಶಾಟ್‌ಪಟ್: ಅರುಣ್‌ ಕುಮಾರ್‌ ತಿವಾರಿ (ಉತ್ತರ ಪ್ರದೇಶ)–1, ಆರ್‌.ರಾಮದಾಸ್ (ತಮಿಳುನಾಡು)–2, ಮಹಿ ಮೋಹನ್ (ಕೇರಳ)–3. ದೂರ: 12.10 ಮೀ.

ಮಹಿಳೆಯರ ವಿಭಾಗ: 100 ಮೀ. ಓಟ: ಶಿಪು ಮೊಂಡಲ್ (ಪಶ್ಚಿಮ ಬಂಗಾಳ)–1, ದಿಶಾ ಪಟೇಲ್ (ಗುಜರಾತ್)–2, ರೇಣುಬಾಲ ಮಹಾಂತ (ಒಡಿಶಾ)–3. ಕಾಲ: 12.9 ಸೆ. 1,500 ಮೀ. ಓಟ: ರೀತು ದಿನಕರ್‌ (ಉತ್ತರ ಪ್ರದೇಶ)–1, ಶ್ರದ್ಧಾ ಆರ್‌.ದೇಸಾಯಿ (ಕರ್ನಾಟಕ)–2, ಎಚ್‌.ಎಂ.ಬರಿಯಾ (ಗುಜರಾತ್)–3. ಕಾಲ: 5 ನಿ.26.08 ಸೆ. ಶಾಟ್‌ಪಟ್‌: ಜಿ.ಕೆ.ನಮಿತಾ (ಕರ್ನಾಟಕ)–1, ಎಸ್‌.ಸುಷ್ಮಾ (ಕರ್ನಾಟಕ)–2, ಟಿಲು ಗೊಗೊಯ್ (ಅಸ್ಸಾಂ)–3. ದೂರ: 11.8 ಮೀ.

ಹೈಜಂಪ್: ಶಿಪು ಮೊಂಡಲ್ (ಪಶ್ಚಿಮ ಬಂಗಾಳ)–1, ಪಿಂಕಿರಾಣಿ (ಹರಿಯಾಣ)–2, ಮಮ್ತಾಜ್‌ ಖಾತೂಮ್ (ಪಶ್ಚಿಮ ಬಂಗಾಳ)–3. ಎತ್ತರ: 1.43 ಮೀ. ಲಾಂಗ್‌ಜಂಪ್: ಶಿಪು ಮೊಂಡಲ್ (ಪಶ್ಚಿಮ ಬಂಗಾಳ)–1, ಎಂ.ರೇಣುಬಾಲ (ಒಡಿಶಾ)–2, ಪಿಂಕಿರಾಣಿ (ಹರಿಯಾಣ)–3. ದೂರ: 5.11 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT