ಆಳ್ವಾಸ್‌ ಸ್ಪೋರ್ಟ್ಸ್‌ ಕ್ಲಬ್‌ಗೆ ಸಮಗ್ರ ಪ್ರಶಸ್ತಿ

7
ಜೂನಿಯರ್‌, ಸೀನಿಯರ್‌ ಅಥ್ಲೆಟಿಕ್‌ ಕ್ರೀಡಾಕೂಟ: ಒಟ್ಟು 28 ಕೂಟ ದಾಖಲೆ

ಆಳ್ವಾಸ್‌ ಸ್ಪೋರ್ಟ್ಸ್‌ ಕ್ಲಬ್‌ಗೆ ಸಮಗ್ರ ಪ್ರಶಸ್ತಿ

Published:
Updated:

ಮಂಗಳೂರು: ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ ತಂಡವು ಬುಧವಾರ ಮುಕ್ತಾಯವಾದ ರಾಜ್ಯ ಸೀನಿಯರ್ ಮತ್ತು ಜೂನಿಯರ್ ಅಥ್ಲೆಟಿಕ್ಸ್‌ ಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.

ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಕೂಟದಲ್ಲಿ ಆಳ್ವಾಸ್‌ ಕ್ಲಬ್‌ ಒಟ್ಟು 582 ಪಾಯಿಂಟ್ಸ್‌ ಗಳಿಸಿತು.  ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಆಳ್ವಾಸ್‌ ಸ್ಪೋರ್ಟ್ಸ್ ಕ್ಲಬ್‌ ಗಳಿಸಿದ 16ನೇ ಸಮಗ್ರ ಚಾಂಪಿಯನ್‌ಷಿಪ್‌ ಇದು. 177 ಪಾಯಿಂಟ್‌ ದಾಖಲಿಸಿದ ಡಿವೈಇಎಸ್‌ ರನ್ನರ್‌ ಅಪ್‌ ಆಯಿತು.

ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಈ ಕೂಟ ನಡೆಯಿತು. ಕೊನೆ ದಿನ ಎಂಟು ದಾಖಲೆಗಳು ಆದವು.

18 ವರ್ಷ ವಯೋಮಿತಿ ಒಳಗಿನ ಬಾಲಕರ ವಿಭಾಗದ ಡಿಸ್ಕಸ್‌ ಥ್ರೋನಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್ (ನೂತನ: 50.69 ಮೀ. ಹಳೆಯದು: ಗೌತಮ್‌ ಜಿ –48. 20 ಮೀ; 2013), 14 ವರ್ಷದೊಳಗಿನವರ ವಿಭಾಗದ ಶಾಟ್‌ಪಟ್‌ನಲ್ಲಿ ಆಳ್ವಾಸ್‌ನ ಗಣೇಶ್‌ (ನೂತನ: 13.39 ಮೀ; ಹಳೆಯದು: ಶ್ರೀನಿವಾಸ್‌ ಎಂ.ಪಿ.– 12.57 ಮೀ; 2013) ದಾಖಲೆ ಮುರಿದಿದ್ದಾರೆ.

ಬಾಲಕಿಯರ ವಿಭಾಗದ ಶಾಟ್‌ಪಟ್‌ನಲ್ಲಿ ರಮ್ಯಶ್ರೀ ಜೈನ್‌ (ನೂತನ: 11.35 ಮೀ; ಹಳೆಯದು: ರಾಹತ್ ಸೈಯದ್ –10.05 ಮೀ) ದಾಖಲೆ ಮೀರಿ ನಿಂತರು. 18 ವರ್ಷದ ಬಾಲಕರ ಡೆಕಥ್ಲಾನ್‌ ವಿಭಾಗದಲ್ಲಿ ವಿ. ವೆಂಕಟೇಶ್‌ (4,855 ಪಾಯಿಂಟ್ಸ್‌: ಹಳೆಯದು: ಅಭಿಜಿತ್‌ ಸಿಂಗ್‌ –4,838 ಪಾಯಿಂಟ್‌–2015), 20 ವರ್ಷದ  ಬಾಲಕಿಯರ ವಿಭಾಗದ ಹ್ಯಾಮರ್‌ ಥ್ರೋನಲ್ಲಿ ಮೂಡುಬಿದಿರೆ ಧವಳ ಕಾಲೇಜಿನ ಆಮ್ರೀನ್‌ ( ಹೊಸದು; 44.76 ಮೀ, ಹಳೆಯದು: ವನಿತಾ ರಾಠೋಡ್‌ –41.71 ಮೀ),  20 ವರ್ಷದ ಬಾಲಕರ ವಿಭಾಗದ ಡೆಕತ್ಲಾನ್‌ನಲ್ಲಿ ಅಭಿಜಿತ್‌ ಸಿಂಗ್‌ (6,602 ಪಾಯಿಂಟ್‌) ಅವರು ಅಭಿಷೇಕ ಶೆಟ್ಟಿ(6,331 ಪಾಯಿಂಟ್‌) ದಾಖಲೆ ಮುರಿದರು. 18 ವರ್ಷ ಬಾಲಕರ 400 ಮೀಟರ್‌ ಹರ್ಡ್‌ಲ್ಸ್‌ನಲ್ಲಿ ಕೃಷ್ಣಾ ಆರ್‌.ಜಿ 55. 2 ಸೆಕೆಂಡ್‌ನಲ್ಲಿ ದೂರ ಕ್ರಮಿಸಿ 2004 ರಲ್ಲಿ ಮೋಹನ್‌ ಜಿ.ಕೆ. (55.4 ಸೆಕೆಂಡು) ದಾಖಲೆ ಮುರಿದರು. 18 ವರ್ಷದ ಟ್ರಿಪಲ್‌ ಜಂಪ್‌ನಲ್ಲಿ ಬೆಂಗಳೂರಿನ ಡಿವೈಇಎಸ್‌ನ ನವೀನ್‌ ಡಿ 14. 94 ಮೀಟರ್‌ ದಾಖಲಿಸಿ 2011ರಲ್ಲಿ ಶಮೀರ್‌ ಎಸ್‌.ಇ. (14.82 ಮೀಟರ್‌) ದಾಖಲೆ ಮುರಿದರು.

ಉತ್ತಮ ಅಥ್ಲೀಟ್‌ಗಳು: 14 ವರ್ಷ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಸ್ಪೋರ್ಟ್ಸ್‌ ಕ್ಲಬ್‌ನ ನಿಯೋಲಾ ಅನ್ನಾ ಕರೊಲಿನ್‌, 14 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಆಳ್ವಾಸ್‌ ಕ್ಲಬ್‌ನ ಗಣೇಶ್‌, 16 ವರ್ಷದ ಬಾಲಕಿಯರ ವಿಭಾಗದಲ್ಲಿ  ವರ್ಷಾ, 16 ವರ್ಷದ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಡಿವೈಇಎಸ್‌ನ ಮಲ್ಲಿಕ್‌  ರಿಹಾನ್‌, 18 ವರ್ಷ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿ ಎಸ್‌.ಬಿ. ಸುಪ್ರಿಯಾ– ಆಳ್ವಾಸ್‌ ಕ್ಲಬ್‌, ಬಾಲಕರ ವಿಭಾಗ– ಆರ್ಯ ಎಸ್‌– ಬೆಂಗಳೂರು ಗ್ರಾಮೀಣ, 20 ವರ್ಷದ ಬಾಲಕಿಯರ ವಿಭಾಗದಲ್ಲಿ ದಾನೇಶ್ವರಿ– ಡಿವೈಇಎಸ್‌ ಬೆಂಗಳೂರು, ಬಾಲಕರ ವಿಭಾಗ– ಕುಶಾಲ್‌ ಅಂಬೋರೆ– ಸಾಯಿ ಬೆಂಗಳೂರು,  ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಕ್ರಮವಾಗಿ  ಸ್ನೇಹಾ– ಅಥ್ಲಾನ್‌ ಫ್ಲೀಟ್‌ ಒಲಿಂಪಸ್‌,  ರಾಧಾಕೃಷ್ಣ– ಅಶ್ವಿನಿ ಸ್ಪೋರ್ಟ್ಸ್‌ ಫೌಂಡೇಶನ್‌ ಬೆಂಗಳೂರು.


ಮೂಡುಬಿದಿರೆಯಲ್ಲಿ ಬುಧವಾರ ಕೊನೆಗೊಂಡ ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನರಾದ ಆಳ್ವಾಸ್‌ ಸ್ಪೋರ್ಟ್ಸ್‌ ಕ್ಲಬ್‌ನ ಕ್ರೀಡಾಪಟುಗಳು. 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !