ಭಾನುವಾರ, ಮಾರ್ಚ್ 7, 2021
31 °C
36 ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ತೆರೆ

ಆಳ್ವಾಸ್ ಮುಡಿಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‌ ತಂಡವು ಬುಧವಾರ ಮುಕ್ತಾಯವಾದ ರಾಜ್ಯಮಟ್ಟದ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‍ಷಿಪ್‍ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು.

ಮೂಡುಬಿದಿರೆಯಲ್ಲಿ ನಡೆದ ಕೂಟದಲ್ಲಿ ಆಳ್ವಾಸ್‌ ಸ್ಪೋರ್ಟ್ಸ್‌ ಕ್ಲಬ್‌ ಒಟ್ಟು 287 ಪಾಯಿಂಟ್ಸ್‌ ಗಳಿಸಿ ಪಾರಮ್ಯ ಮೆರೆಯಿತು. 33 ಚಿನ್ನ, 29 ಬೆಳ್ಳಿ, 35 ಕಂಚಿನ ಪದಕಗಳು ಆಳ್ವಾಸ್‌ ಪಾಲಾಯಿತು. 90 ಪಾಯಿಂಟ್‌ ದಾಖಲಿಸಿದ ಉಡುಪಿ ಜಿಲ್ಲೆಯು ರನ್ನರ್‌ ಅಪ್‌ ಆಯಿತು. ಮೈಸೂರು 84 ಪಾಯಿಂಟ್‌ಗಳೊಂದಿಗೆ ತೃತೀಯ ಸ್ಥಾನ ಪಡೆಯಿತು.

ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ್ದ ಕೂಟದಲ್ಲಿ ಕೊನೆಯ ದಿನ ಒಂದು ದಾಖಲೆ ಆಯಿತು. ಸಮಾರೋಪದಲ್ಲಿ ಒಲಿಂಪಿಯನ್ ಪ್ರಮೀಳಾ ಅಯ್ಯಪ್ಪ, ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಉಪಾಧ್ಯಕ್ಷ ಎಸ್.ಎಸ್. ಹಿರೇಮಠ, ಕಾರ್ಯದರ್ಶಿ ರಾಜವೇಲು, ಸದಸ್ಯ ಬಾಬು ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಇದ್ದರು.

ಫಲಿತಾಂಶಗಳು:  20ವರ್ಷದೊಳ ಗಿನವರ ವಿಭಾಗ:

ಪುರುಷರು: 10000ಮೀ ರೇಸ್: ವೈಭವ್ ಎಂ.ಪಾಟೀಲ್(ಡಿವೈಇಎಸ್ ಸ್ಪೋರ್ಟ್ಸ್‌ ಹಾಸ್ಟೆಲ್ ಬೆಂಗಳೂರು)-1 ಕಾಲ: 35:40.2ನಿ., ಹರಿರಾಮ (ಬೆಂಗಳೂರು)– 2, ಗೌತಮ್‍ರಾಜ್ ಎಂ.ಎಸ್.(ಜೆಸು ಅಥ್ಲೆಟಿಕ್ಸ್ ಬೆಂಗಳೂರು)-3.

200ಮೀ. ರೇಸ್: ಅಬಿನ್ ದೇವಾಡಿಗ(ಉಡುಪಿ)-1 ಕಾಲ: 21.3ಸೆ., ಮಹೇಶ್ ಸಿದ್ದಪ್ಪ (ಆಳ್ವಾಸ್)-2, ವಿನಾಯಕ್ (ಧಾರವಾಡ)-3.

ಮಹಿಳೆಯರು: 200ಮೀ. ರೇಸ್: ಹರ್ಷಿಣಿ (ವುಮೆನ್ಸ್ ಸ್ಪೋರ್ಟ್ಸ್‌ ಹಾಸ್ಟೆಲ್, ಮೈಸೂರು)-1 ಕಾಲ: 25.7ಸೆ., ನೀತಾ ಪಿ.ಕೆ.(ವುಮೆನ್ಸ್ ಸ್ಪೋರ್ಟ್ಸ್‌ ಹಾಸ್ಟೆಲ್, ಮೈಸೂರು)-2, ವರ್ಷಾ ವಿಜಯ್(ದಕ್ಷಿಣ ಕನ್ನಡ)-3.

14 ವರ್ಷದೊಳಗಿನವರ ವಿಭಾಗ: ಬಾಲಕರು: ಲಾಂಗ್‍ಜಂಪ್: ಪ್ರಣವ್ ಜಿ.(ಬಳ್ಳಾರಿ)-1 ದೂರ: 5.26ಮೀ., ಮನ್ವಿತ್ ಎಂ.(ಚಾಮರಾಜನಗರ)-2, ಸವಿನ್(ಉಡುಪಿ)-3. ಶಾಟ್‍ಪಟ್: ಅನುರಾಗ್(ಉಡುಪಿ)-1 ದೂರ:17.45ಮೀ., ಗಣೇಶ್ ಎಂ.ನಾಯಕ್(ಉತ್ತರಕನ್ನಡ)-2, ಅಜಿತ್ ಪಾಟೀಲ್ (ಆಳ್ವಾಸ್)–3

ಬಾಲಕಿಯರು: ಶಾಟ್‍ಪಟ್: ಸಿಂಚನಾ(ಉಡುಪಿ)-1 ದೂರ:10.30ಮೀ., ವಿಸ್ಮಿತಾ (ಆಳ್ವಾಸ್)-2, ಚಂದನಾ ಎಂ.(ಚಾಮರಾಜನಗರ)-3

16 ವರ್ಷದೊಳಗಿನವರು: ಬಾಲಕರು:

 5000 ಮೀ. ರೇಸ್‍ವಾಕ್: ಪವನ್‍ಕುಮಾರ್ ಎಸ್.(ಮೈಸೂರು)-1 ಕಾಲ: 32:30.4ಸೆ. ಡಿಸ್ಕಸ್ ಥ್ರೋ: ಗಣೇಶ್ ಎಚ್(ಆಳ್ವಾಸ್)-1 ದೂರ: 36.24ಮೀ., ಕುಲದೀಪ್‍ಕುಮಾರ್ (ದಕ್ಷಿಣ ಕನ್ನಡ)-2, ಸ್ವರೂಪ್ ಎಚ್. ಎ. (ಮೈಸೂರು)-3.

ಬಾಲಕಿಯರು: 3000 ಮೀ. ರೇಸ್‍ವಾಕ್: ಶಶಿಕಲಾ ಡಿ. ಕನ್ನಮ್ಮಾಡಿ(ಆಳ್ವಾಸ್)-1 ಕಾಲ: 21:25.8ಸೆ., ಕಾವ್ಯಾ ಎಲ್. (ಚಿಕ್ಕಮಗಳೂರು)-2, ಸನ್ಮಿತಾ(ಚಿಕ್ಕಮಗಳೂರು)-3.

ಡಿಸ್ಕಸ್ ಥ್ರೋ: ಪ್ರಾಂಜಲಿ(ದಕ್ಷಿಣಕನ್ನಡ)-1 ದೂರ: 33.73ಮೀ., ಐಶ್ವರ್ಯ ಬಿ.(ಆಳ್ವಾಸ್)-2, ಮೇಘಾ ಮಥಾಯ್(ದಕ್ಷಿಣ ಕನ್ನಡ)-3

18 ವರ್ಷದೊಳಗಿನವರ ವಿಭಾಗ: ಬಾಲಕರು: 200 ಮೀ. ಓಟ: ಆಕಾಶ್ (ದಕ್ಷಿಣ ಕ್ನನಡ)-1 ಕಾಲ:22.9ಸೆ., ಸುಮಿತ್(ಬೆಂಗಳೂರು)-2, ರುಬೆನ್(ಬೆಳಗಾವಿ)-3.

ಹೈಜಂಪ್: ಅನಿಲ್‍ಕುಮಾರ್ ಕೆ.(ಆಳ್ವಾಸ್)-1 ಎತ್ತರ: 1.65 ಮೀ., ಚರಿತ್‍ಪ್ರಕಾಶ್(ದಕ್ಷಿಣ ಕನ್ನಡ)-2, ಪ್ರದ್ಯುಮ್ನ ಸಂಪತ್ (ಬೆಂಗಳೂರು)-3.

ಜಾವೆಲಿನ್ ಥ್ರೋ: ರಹಿಯಾನ್(ನಿಟ್ಟೆ ಸ್ಪೋರ್ಟ್ಸ್ ಕ್ಲಬ್)-1 ದೂರ: 52.08ಮೀ., ಪೃಥ್ವಿ ಎಸ್. (ಆಳ್ವಾಸ್)-2, ಯಶವಂತ್ ಗೌಡ (ಆಳ್ವಾಸ್)-3.

ಬಾಲಕಿಯರು: ಟ್ರಿಪಲ್‍ಜಂಪ್: ಕೃತಿ ಜಿ.ಶೆಟ್ಟಿ(ಆಳ್ವಾಸ್)-1 ದೂರ: 11.42ಮೀ., ಐಶ್ವರ್ಯ ನೇಸರ್‍ಕರ್(ಬೆಳಗಾವಿ)-2, ಯಾಶ್ಮೀನ್ ಶೇಖ್ (ಆಳ್ವಾಸ್)-3.

ಶಾಟ್‍ಪಟ್: ಬೃಂದಾ ಗೌಡ(ವುಮೆನ್ಸ್ ಸ್ಪೋರ್ಟ್ಸ್ ಹಾಸ್ಟೆಲ್ ಮೈಸೂರು)-1 ದೂರ: 13.41 ಮೀ., ನಿಶೆಲ್ ಡಿಸೋಜಾ (ದಕ್ಷಿಣಕನ್ನಡ)-2, ಲಿಖಿತಾ ಯೋಗೇಶ್ (ಮೈಸೂರು)-3.

ಜಾವೆಲಿನ್ ಥ್ರೋ: ರಮ್ಯಶ್ರೀ ಜೈನ್(ಆಳ್ವಾಸ್)-1 ದೂರ: 44.54ಮೀ., ವೀಣಾ ಎಂ.(ಆಳ್ವಾಸ್)-2, ರುಕ್ಮಿಣಿ ಎಂ.ಬಿ.(ವುಮೆನ್ಸ್‌  ಸ್ಪೋರ್ಟ್ಸ್‌ ಹಾಸ್ಟೆಲ್ ಮೈಸೂರು)-3.

ಹೈಜಂಪ್: ಸಿಂಚನಾ ಎಂಎಸ್(ಆಳ್ವಾಸ್)-1 ಎತ್ತರ: 1.67ಮೀ., ಸಮ್ರೀನ್ ಶೇಖ್ (ಆಳ್ವಾಸ್)-2, ಕೀರ್ತಿ ಎಚ್‍ಟಿ (ಆಳ್ವಾಸ್)-3.

200ಮೀ. ರೇಸ್: ಪ್ರಿಯಾ ಎಚ್. ಮೋಹನ್ (ಅರ್ಜುನ್ ಟ್ರ್ಯಾಕ್ ಆಂಡ್ ಫೀಲ್ಡ್, ಬೆಂಗಳೂರು)-1 ಕಾಲ: 25.1ಸೆ., ನಿಯೋಲ್ (ಬೆಂಗಳೂರು)-2, ಸಂಜನಾ ಆನಂದ್(ಧಾರವಾಡ)-3.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು