ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌: ಸೆಮಿಯಲ್ಲಿ ನಿರ್ಗಮಿಸಿದ ಸೌರಭ್

Last Updated 14 ಜುಲೈ 2019, 20:26 IST
ಅಕ್ಷರ ಗಾತ್ರ

ಫುಲ್ಲರ್‌ಟನ್‌, ಅಮೆರಿಕ: ಸೌರಬ್‌ ವರ್ಮಾ ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ತಾನೊಂಗ್‌ಸಾಕ್‌ ಸೇನ್ಸೊಮ್‌ಬೂನ್‌ಸುಕ್‌ ಅವರಿಗೆ ನೇರ ಗೇಮ್‌ಗಳಲ್ಲಿ ಮಣಿಯುವ ಮೂಲಕ ಅಮೆರಿಕ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಥಾಯ್ಲೆಂಡ್‌ನತಾನೊಂಗ್‌ಸಾಕ್‌ 21–9, 21–18 ರಿಂದ ವಿಶ್ವ ಕ್ರಮಾಂಕದಲ್ಲಿ 43ನೇ ಸ್ಥಾನದಲ್ಲಿರುವ ಸೌರಬ್‌ ಮೇಲೆ ಕೇವಲ 39 ನಿಮಿಷಗಳಲ್ಲಿ ಜಯಗಳಿಸಿದರು.

ಮೊದಲ ಗೇಮ್‌ನಲ್ಲಿ ಪರದಾಡಿದ ಸೌರಬ್‌, ಎರಡನೇ ಗೇಮ್‌ನಲ್ಲಿ ಹೋರಾಟ ತೋರಿದರು.

ಭಾರತದ ಇತರ ಆಟಗಾರರಾದ ಪರುಪಳ್ಳಿ ಕಶ್ಯಪ್‌, ಎಚ್‌.ಎಸ್‌.ಪ್ರಣಯ್‌, ಅಜಯ್‌ ಜಯರಾಮ್‌ ಮತ್ತು ಲಕ್ಷ್ಯ ಸೇನ್ ಈ ಹಿಂದಿನ ಸುತ್ತುಗಳಲ್ಲೇ ನಿರ್ಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT